ರಾಷ್ಟ್ರೀಯ

ಮೋಹನ್‌ ಭಾಗವತ್‌ರ ತಿರುಚಿದ ಫೋಟೊ ಪೋಸ್ಟ್‌ ಮಾಡಿದ ವ್ಯಕ್ತಿ ವಿರುದ್ಧ ದೂರು

Pinterest LinkedIn Tumblr


ಇಂದೋರ್: ಆರ್‌ಎಸ್ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ತಿರುಚಿದ ಫೋಟೋವನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಶೇರ್‌ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲಾಗಿದೆ.

ವ್ಯಕ್ತಿಯನ್ನು ಲಕ್ಕಿ ವರ್ಮಾ ಎಂದು ಗುರುತಿಸಲಾಗಿದ್ದು, ಅಕ್ಟೋಬರ್‌ 19ರಂದು ಫೋಟೋವನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಹಾಕಿದ್ದ. ಈತನೇ ಗ್ರೂಪ್‌ನ ಆಡ್ಮಿನಿಸ್ಟ್ರೇಷನ್‌ ಆಗಿದ್ದ ಎಂದು ರಾಜಿ ಬಜಾರ್‌ ಪೊಲೀಸ್‌ ಠಾಣೆಯ ಮುಖ್ಯಸ್ಥ ಸಂತೋಷ್‌ ಸಿಂಗ್‌ ತಿಳಿಸಿದ್ದಾರೆ.

ಈತನ ವಿರುದ್ಧ ಸಂಘದ ಸ್ವಯಂ ಸೇವಕ ಶೈಲೇಂದ್ರ ಶರ್ಮಾ ದೂರನ್ನು ದಾಖಲಿಸಿದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆಯ ಐಪಿಸಿ ಸೆಕ್ಷನ್‌ 505 (2) ಮತ್ತು 67ರ ಅಡಿಯಲ್ಲಿ ಭಾನುವಾರ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿ ಯಾದವ್‌ ನಾಪತ್ತೆಯಾಗಿದ್ದಾನೆ.

ಆರೋಪಿಯು ಕಾಂಗ್ರೆಸ್‌ ವಿದ್ಯಾರ್ಥಿ ಘಟಕದ ಎನ್‌ಎಸ್‌ಯುಐ ಕಾರ್ಯಕರ್ತನಾಗಿದ್ದಾನೆ ಎಂದು ಆರ್‌ಎಸ್‌ಎಸ್‌ನ ಸ್ಥಳೀಯ ವಕ್ತರಾ ಸಾಗರ್‌ ಚೌಕ್‌ ಆರೋಪಿಸಿದ್ದಾರೆ.

Comments are closed.