ನವದೆಹಲಿ: ಬ್ಯಾಂಕ್ ಮತ್ತು ಮೊಬೈಲ್ ಗೆ ಆಧಾರ್ ಲಿಂಕ್ ಕಡ್ಡಾಯ ನಿಯಮ ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸಂಸತ್ ಪಾಸ್ ಮಾಡಿದ ಕಾನೂನು ಇದನ್ನು ಪುನರ್ ಸ್ಥಾಪಿಸಲಿದೆ. ಆದರೆ ಈ ಸಂಬಂಧ ಹೊಸ ಕಾನೂನು ತರುವುದಿಲ್ಲ ಅಂತ ಹೇಳುವುದಿಲ್ಲ ಎಂದಿದ್ದಾರೆ.
ಕಳೆದ ತಿಂಗಳು ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಮಾತ್ರ ಆಧಾರ್ ಕಡ್ಡಾಯ. ಟೆಲಿಕಾಂ ಕಂಪನಿಗಳಿಗೆ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಹೇಳಿತ್ತು.
ತೀರ್ಪು ಐತಿಹಾಸಿಕ ಎಂದಿರುವ ಅರುಣ್ ಜೇಟ್ಲಿ, ಆಧಾರ್ ಕಾನೂನುಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.
ಎಚ್ ಟಿ ಲೀಡರ್ ಶಿಪ್ ಸಮಿತ್ ನಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಆಧಾರ್ ದೇಶದ ಪೌರತ್ವದ ಕಾರ್ಡ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಧಾರ್ ಎಲ್ಲಾ ರೀತಿಯ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಲಾಭ ಮತ್ತು ಸಬ್ಸಿಡಿಯನ್ನು ಪಡೆಯಲು ಒಂದು ವ್ಯವಸ್ಥೆಯಾಗಿದ್ದು, ಅದು ಆಧಾರ್ ನ ಮೂಲ ಉದ್ದೇಶ ಎಂದು ಸಚಿವರು ಹೇಳಿದ್ದಾರೆ.
Comments are closed.