ರಾಷ್ಟ್ರೀಯ

ತೆಲಂಗಾಣ, ಮಧ್ಯ ಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಡಿ.11ಕ್ಕೆ ಹೊರಬೀಳಲಿದೆ ಫಲಿತಾಂಶ

Pinterest LinkedIn Tumblr

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರದೇಶ, ಮಿಜೋರಾಂ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸ್‌ ಗಢ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಶನಿವಾರ ಪ್ರಕಟಿಸಿದ್ದು, ಛತ್ತೀಸ್ ಗಢ್ ದಲ್ಲಿ ಎರಡು ಹಂತದಲ್ಲಿ ಹಾಗೂ ಇತರೆ ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಒ ಪಿ ರಾವತ್ ಅವರು, ಮಧ್ಯ ಪ್ರದೇಶ ಹಾಗೂ ಮಿಜೋರಾಂನಲ್ಲಿ ನವೆಂಬರ್ 28ಕ್ಕೆ ಒಂದೇ ಹಂತದಲ್ಲಿ ಹಾಗೂ ಛತ್ತೀಸ್ ಗಢದಲ್ಲಿ ನವೆಂಬರ್ 12 ಮತ್ತು 20ಕ್ಕೆ ಎರಡು ಹಂತದ ಚುನಾವಣೆ ನಡೆಯಲಿದೆ ಎಂದರು.

ತೆಲಂಗಾಣದ ಮತ್ತು ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯುಲಿದ್ದು, ಡಿಸೆಂಬರ್ 11ಕ್ಕೆ ಎಲ್ಲಾ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ರಾವತ್ ತಿಳಿಸಿದ್ದಾರೆ.

ಚುನಾವಣೆ ನಡೆಯಲಿರುವ ಈ ಐದು ರಾಜ್ಯಗಳಲ್ಲಿ ಇಂದಿನಿದಂಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ರಾವ್ ತಿಳಿಸಿದ್ದಾರೆ.

ಅಭ್ಯರ್ಥಿಗಳ ಚುನಾವಣಾ ವೆಚ್ಚ 28 ಲಕ್ಷ ರುಪಾಯಿ ನಿಗದಿ ಮಾಡಲಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ನ ಸೂಚನೆ ಮತ್ತು ನಿಯಮ ಪಾಲಿಸಬೇಕು. ನೀತಿ ಸಂಹಿತೆ ಪಾಲನೆಯ ಜತೆಗೆ, ಆಸ್ತಿ ವಿವರ, ಕ್ರಿಮಿನಲ್ ಹಿನ್ನೆಲೆ ಘೋಷಿಸುವುದು ಕಡ್ಡಾಯವಾಗಿದೆ ಎಂದು ರಾವತ್ ಹೇಳಿದ್ದಾರೆ.

Comments are closed.