ಕರಾವಳಿ

ಪ್ರತಿಯೊಂದು ಬಣ್ಣಕ್ಕೂ ಇದೆ ಒಂದು ಅರ್ಥಪೂರ್ಣವಾದ ಅರ್ಥ.!

Pinterest LinkedIn Tumblr

ಪ್ರೇಮಯಾಚನೆ ಇಂದ ಕ್ಷಮೆಯಾಚನೆ ವರೆಗೂ ಪ್ರಿಯೊಂದು ಬಾವನೆಗಳ ವಿನಿಮಯಕ್ಕೆ ಬಳಸುವುದು ಹೂಗಳ ರಾಜ ಗುಲಾಭಿಯನ್ನೇ, ಇನ್ನು ಗುಲಾಭಿಯಲ್ಲಿ ಹಲವು ಬಣ್ಣ ಅದರಂತೆ ಹಲವಾರು ಬಣ್ಣಗಳಿಗೂ ಇದೆ ಅದರದೇ ಆದ ವೈಶಿಷ್ಯ ಹಾಗಾಗಿ ನೀವು ನಿಮ್ಮ ಗುಲಾಬಿಯನ್ನು ಆಯ್ದುಕೊಳ್ಳುವ ಮೊದಲು ಅದರ ಅರ್ಥ ಒಮ್ಮೆ ಓದಿ ಬಿಡಿ.

ಕೆಂಪು ಗುಲಾಬಿ : ಕೆಂಪು ಗುಲಾಭಿಯನ್ನ ಅತಿ ಹೆಚ್ಚಾಗಿ ಪ್ರೀತಿಯ ಸಂಖೇತವನ್ನಾಗಿ ಬಳಸಲಾಗುತ್ತದೆ, ಆದರೆ ಪ್ರೀಯಿಗೆ ಅಷ್ಟೇ ಅಲ್ಲದೆ ಗೌರವ ಹಾಗು ಭಕ್ತಿಗು ಕೆಂಪು ಗುಲಾಬಿ ಬಳಕೆಯಲ್ಲಿದೆ ಅದರಲ್ಲೂ ಕ್ಷಮೆ ಕೇಳಲು ಸಹ ಗುಲಾಬಿ ಬಳಕೆ ಮಾಡುತ್ತಾರೆ.

ಬಿಳಿ ಗುಲಾಬಿ : ಬಿಳಿ ಬಣ್ಣ ಶಾಂತಿಯ ಸಂಕೇತ, ಅದರಂತೆ ಗುಲಾಬಿ ಬಣ್ಣವನ್ನು ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ಮದುವೆಮನೆ ಸಿಂಗರಿಸಲು ಬಳಸುತ್ತಾರೆ ಕಾರಣ ಬಿಳಿ ಗುಲಾಬಿ ಒಗ್ಗಟ್ಟು, ಹೊಂದಾಣಿಕೆ ಹಾಗೆ ಸ್ವಚ್ಛ ಪ್ರೀತಿಯ ಸಂಕೇತ.

ಹಳದಿ ಗುಲಾಬಿ : ಹಳದಿ ಸ್ನೇಹ ಸಂಕೇತ, ಹಾಗಾಗಿ ನೀವು ನಿಮ್ಮ ಸ್ನೇಹಿತರಿಗೆ ಹಳದಿ ಹೂವನ್ನ ಬಳಸಬಹುದು, ನಿಮ್ಮ ಸ್ನೇಹಿತರಿಗೆ ಗೌರವ ಕಾರ್ಯಕ್ರಮ ಏನಾದರೂ ಆಯೋಜಿಸಿದ್ದಾರೆ ನೀವು ಹಳದಿ ಗುಲಾಬಿಯನ್ನ ಅತಿ ಹೆಚ್ಚಾಗಿ ಬಳಸಿ.

ನೇರಳೆ ಗುಲಾಬಿ : ನೇರಳೆ ಬಣ್ಣದ ಗುಲಾಬಿ ನಿಮಗೆ ಕಾಣಲು ಅಷ್ಟಾಗಿ ಸಿಗುವುದಿಲ್ಲ, ನೇರಳೆ ಬಣ್ಣ ಹೂ ಕೂಡ ಪ್ರೀತಿಯ ಸಂಕೇತವೇ, ನಿಮಗೆ ಯಾರ ಮೇಲಾದರೂ ಮೊದಲ ಬಾರಿ ನೋಡಿದ ಕೂಡಲೇ ಪ್ರೀತಿಯಾದರೆ ನೀವು ನೇರಳೆ ಬಣ್ಣದ ಹೂ ನೀಡಬಹುದು.

ಕಪ್ಪು ಗುಲಾಬಿ : ಕಪ್ಪು ಬಣ್ಣ ಒಳ್ಳೆಯ ಸಂಕೇತವಲ್ಲ ಎಂಬುದು ನಿಮಗೂ ಸಹ ಗೊತ್ತಿರುವ ವಿಷ್ಯ, ಇನ್ನು ಕಪ್ಪು ಗುಲಾಬಿಯನ್ನ ಸಂಭಂದಗಳ ಅಂತ್ಯಕ್ಕೆ ಕಪ್ಪು ಗುಲಾಬಿಯನ್ನ ನೀಡಲಾಗುವುದು.

Comments are closed.