ರಾಷ್ಟ್ರೀಯ

ಹಿಂದೂಗಳ ಯಾತ್ರೆಯಲ್ಲಿ ಭಾಗವಹಿಸಿದ್ದೇ ತಪ್ಪ? ಮುಸ್ಲಿಂ ವ್ಯಕ್ತಿಗೆ ನಮಾಜ್ ಮಾಡಲು ಸ್ವಧರ್ಮೀಯರಿಂದಲೇ ವಿರೋಧ!

Pinterest LinkedIn Tumblr


ಬಾಗ್ಪಟ್: ಹರಿದ್ವಾರದಲ್ಲಿ ಹಿಂದೂಗಳ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ವ್ಯಕ್ತಿ ಸ್ವಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ನಮಾಜ್ ಮಾಡುವುದಕ್ಕೆ ಸ್ವಧರ್ಮೀಯರೇ ವಿರೋಧ ವ್ಯಕ್ತಪಡಿಸಿದ್ದಾರೆ.
“ಹರಿದ್ವಾರದಲ್ಲಿ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿ ದೇವಾಲಯದಲ್ಲಿ ಅಭಿಷೇಕ ಮಆದಿಸಿದೆ, ವಾಪಸ್ ಮಸೀದಿಗೆ ಹೋದಾಗ ನಮಾಜ್ ಮಾಡಲು ನನಗೆ ಅವಕಾಶ ನೀಡಲಿಲ್ಲ, ನನ್ನ ಮೇಲೆ ಹಲ್ಲೆ ನಡೆಸಿದರು, ಮಸೀದಿಯಿಂದ ಹೋಗುವಂತೆ ಒತ್ತಾಯಿಸಿದರು ಎಂದು ನೊಂದ ವ್ಯಕ್ತಿ ಬಾಬು ಖಾನ್ ಹೇಳಿದ್ದಾರೆ.
ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು ನಮಜ್ ಮಾಡುವುದಕ್ಕೆ ಅವಕಾಶ ನೀಡದಿರುವ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಾಬು ಖಾನ್ ದೇವಾಲಯಕ್ಕೆ ತೆರಳಿದ ಹಿನ್ನೆಲೆಯಲ್ಲಿ ನಮಾಜ್ ಮಾಡಲು ಅವಕಾಶ ನಿರಾಕರಿಸಿದ್ದೂ ಅಲ್ಲದೆ ಅವರ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ.
ಶಾಂತಿ ಕದಡಿದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ ಎಂದು ಬಾಗ್ಪಾಟ್ ನ ಎಸ್ ಐ ದೇವೇಂದ್ರ ಬಸಿತ್ ತಿಳಿಸಿದ್ದಾರೆ. ಬಾಬು ಖಾನ್ ಅವರೊಂದಿಗೆ ಹಿಂದೂ ಜಾಗರಣ ಮಚ್ ಸಂಘಟನೆ ಇರುತ್ತದೆ, ಬಾಬು ಖಾನ್ ಮೇಲೆ ದೌರ್ಜನ್ಯ ನಡೆದರೆ ಅದನ್ನು ಸಹಿಸುವುದಿಲ್ಲ ಎಂದು ಸಂಘಟನೆಯ ಅಧ್ಯಕ್ಷ ದೀಪಕ್ ಬನ್ಮೌಳಿ ಹೇಳಿದ್ದಾರೆ. ಶ್ರಾವಣ ಮಾಸದಲ್ಲಿ ಹಿಂದೂಗಳು ಗಂಗಾ ಜಲವನ್ನು ತೆಗೆದುಕೊಂಡು ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಪದ್ಧತಿ ಇದ್ದು, ಕನ್ವರ್ ಯಾತ್ರೆಯ ಭಾಗವಾಗಿ ಬಾಬು ಖಾನ್ ಸಹ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

Comments are closed.