ರಾಷ್ಟ್ರೀಯ

ಭಗವಾನ್ ಶಿವನಿಂದ ಉಚಿತ ಹೆಲ್ಮೆಟ್ ವಿತರಣೆ!

Pinterest LinkedIn Tumblr


ಕಾನ್ಪುರ: ಶುಭ ಶ್ರಾವಣ ಮಾಸದ ನಿರೀಕ್ಷೆಯಲ್ಲಿರುವ ಇಟಾವಾದ ಜನರು ಶನಿವಾರ ರಸ್ತೆಯಲ್ಲಿ ಭಗವಾನ್ ಶಿವನನ್ನು ಕಂಡು ಒಂದು ಕ್ಷಣ ಸ್ತಂಭೀಭೂತರಾಗಿ ಹೋದರು. ನಗುನಗುತ್ತ ಓಡಾಡುತ್ತಿದ್ದ ಶಿವ , ಶಿರಸ್ತ್ರಾಣ ಧರಿಸದೇ ವಾಹನ ಚಲಾಯಿಸುವುದು ಪ್ರಾಣಾಪಾಯವನ್ನು ಆಹ್ವಾನಿಸಿಕೊಂಡಂತೆ ಎಂದು ದ್ವಿಚಕ್ರವಾಹನ ಸವಾರರಿಗೆ ವಿವರಿಸುತ್ತ ಹೆಲ್ಮೆಟ್ ಹಸ್ತಾಂತರಿಸುತ್ತಿದ್ದ.

ರಸ್ತೆ ಸುರಕ್ಷತೆಯ ಅರಿವುಂಟು ಮಾಡಿಕೊಡಲು ಟ್ರಾಫಿಕ್ ಪೊಲೀಸ್ ಸಬ್ ಇನ್ಸಪೆಕ್ಟರ್ ವಿಕಾಸ್ ಅತ್ರಿ ಕಂಡುಕೊಂಡ ದಾರಿ ಇದು. ಶಿವನ ವೇಷ ಧರಿಸಿಕೊಂಡು ತಮ್ಮ ಸಹೋದ್ಯೋಗಿಗಳ ಜತೆ ಶಾಸ್ತ್ರೀ ನಗರ ಚೌರಾನಾ ರಸ್ತೆಯಲ್ಲಿ ಓಡಾಡಿದ ಅವರು ಉಚಿತವಾಗಿ ಹೆಲ್ಮೆಟ್ ಹಂಚಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಇಟಾವಾ ಎಸ್ಎಸ್‌ಪಿ ಅಶೋಕ್ ಕುಮಾರ್ ತ್ರಿಪಾಠಿ, ಪ್ರತಿನಿತ್ಯ ರಸ್ತೆ ಅಪಘಾತಗಳಾಗುತ್ತಿದ್ದರು ಜನರಿಗೆ ಹೆಲ್ಮೆಟ್ ಧರಿಸಬೇಕಾದ ಅಗತ್ಯ ಅರ್ಥವೇ ಆಗುವುದಿಲ್ಲ. ಹೀಗಾಗಿ ಧಾರ್ಮಿಕ ಮತ್ತು ಭಾವನಾತ್ಮಕ ಮನವಿಯ ನೂತನ ತಂತ್ರ ಬಳಸಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಉಪಾಯ ಮಾಡಿದೆವು. ಭವಿಷ್ಯದಲ್ಲೂ ನವೀನತಮ ಅಭಿಯಾನಗಳ ನೂಲಕ ರಸ್ತೆ ಸುರಕ್ಷತಾ ನಿಯಮಾವಳಿಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದ್ದಿದ್ದಾರೆ.

ಇಟಾವಾ ಪೊಲೀಸರ ಈ ಪ್ರಯತ್ನ ಎಲ್ಲರಿಂದಲೂ ಪ್ರಶಂಸೆಗೊಳಗಾಗಿದೆ.

Comments are closed.