ರಾಷ್ಟ್ರೀಯ

ಉತ್ತರಪ್ರದೇಶ: 60 ಸಾವಿರ ಕೋಟಿಯ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ!

Pinterest LinkedIn Tumblr


ಲಖನೌ: ಉತ್ತರಪ್ರದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲಖನೌದಲ್ಲಿ 60 ಸಾವಿರ ಕೋಟಿ ರುಪಾಯಿಯ ವಿವಿಧ ಯೋಜನೆಗಳಿಗೆ ಭಾನುವಾರ ಚಾಲನೆ ನೀಡಿದರು.
ಒಂದೇ ದಿನ ಹಲವು ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಇದು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದ ಊಹಿಸಲಾಗದ ಸಾಧನೆ ಎಂದು ಕೊಂಡಾದಿದರು.
ಉತ್ತರ ಪ್ರದೇಶದಲ್ಲಿ ಐಟಿ ಕ್ರಾಂತಿಯಾಗಲಿದ್ದು ಇದು ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾಗೆ ಹೊಸ ದಾರಿಯಾಗಲಿದೆ. ನಮ್ಮ ದೇಶ ವಿಶ್ವಕ್ಕೆ ಮೊಬೈಲ್ ಉತ್ಪಾದಕರ ಹಬ್ ಆಗುವತ್ತ ಸಾಗಿದೆ.
ಉತ್ತರ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಉತ್ಪಾದಕ ಕಂಪನಿಗಳಿದ್ದು ಅತೀ ದೊಡ್ಡ ಮೊಬೈಲ್ ಉತ್ಪಾದಕ ಕಂಪನೆಯೂ ಇಲ್ಲಿ ತಲೆ ಎತ್ತಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಉತ್ತರಪ್ರದೇಶ ಹೂಡಿಕೆದಾರರ ಶೃಂಗದಲ್ಲಿ ಸಹಿ ಹಾಕಲಾಗಿದ್ದ 4.28 ಲಕ್ಷ ಕೋಟಿ ರು. ಮೌಲ್ಯದ 1,045 ತಿಳಿವಳಿಕೆ ಒಪ್ಪಂದಗಳ ಪೈಕಿ 81 ಯೋಜನೆಗಳ ಅನುಷ್ಠಾನಕ್ಕೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚಾಲನೆ ನೀಡಿದ್ದಾರೆ.

Comments are closed.