ಕರ್ನಾಟಕ

ದಿನ ದಿನ ಕಾವೇರುತ್ತಿರುವ ಪ್ರತ್ಯೇಕ ರಾಜ್ಯದ ಕೂಗು!

Pinterest LinkedIn Tumblr


ತಿರುವನಂತಪುರಂ: ಒಂದೆಡೆ ಬಿಜೆಪಿ ಪಾದಯಾತ್ರೆ ನಡೆಸಿ, ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಯಾದ್ರೆ ಅತ್ತ ಕೇರಳದಲ್ಲಿ ಕುಮಾರಸ್ವಾಮಿ ಬಿಜೆಪಿಯವರಿಗೆ ಅದರಲ್ಲೂ ಪ್ರತ್ಯೇಕ ರಾಜ್ಯದ ವಿಚಾರವಾಗಿ ಶ್ರೀರಾಮುಲುಗೆ ಟಾಂಗ್ ಕೊಟ್ಟಿದ್ದಾರೆ. ಈ ನಡುವೆ ಅಖಂಡ ಕರ್ನಾಟಕವೇ ಇರಲಿ ಎಂದು ಉತ್ತರ ಕರ್ನಾಟಕದ ಕೆಲ ನಾಯಕರೇ ಧ್ವನಿಯೆತ್ತಿದ್ದಾರೆ.

ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗ್ತಿದೆ. ಬಜೆಟ್​​ನಲ್ಲಿ ಅನ್ಯಾಯವಾಗಿದೆ ಅನ್ನೋ ಶಾಸಕ ಶ್ರೀರಾಮುಲು ಹೇಳಿಕೆಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಕೇರಳದ ಅಲೆಪಿಯಲ್ಲಿ ಮಾತಾಡಿದ ಕುಮಾರಸ್ವಾಮಿ, ರಾಮುಲು ಅವರಿಗೆ ಅವರದ್ದೇ ಪಕ್ಷ ಇದ್ದಾಗ ಯಾವುದೂ ನೆನಪಾಗಲ್ಲ ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಉತ್ತರ ಕರ್ನಾಟಕದ ವಿಚಾರ ನೆನಪಿಗೆ ಬರುತ್ತೆ ಎಂದಿದ್ದಾರೆ.

ಈ ನಡುವೆ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಈ ಭಾಗದ ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಿ ಅಂತಾ ಕಲಬುರ್ಗಿಯಲ್ಲಿ ಡಾ. ಶರಣಬವಸಪ್ಪ ಅಪ್ಪಾ ಹೇಳಿದ್ದಾರೆ. ಇನ್ನು ನಮ್ಮ ಹೋರಾಟವೇನಿದ್ರೂ ಕಲ್ಯಾಣ ಕರ್ನಾಟಕಕ್ಕೆ ಮಾತ್ರ.. ಪ್ರತ್ಯೇಕ ರಾಜ್ಯಕ್ಕಾಗಿ ಅಲ್ಲ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಹೇಳಿದ್ದಾರೆ

ಒಟ್ಟಿನಲ್ಲಿ ಒಂದೆಡೆ ಪ್ರತಿ ಬಾರಿ ಚುನಾವಣೆ ಬಂದಾಗಲೂ ಜೀವ ಪಡೆಯುವಂತೆ ಈ ಬಾರಿಯೂ ಪ್ರತ್ಯೇಕ ರಾಜ್ಯದ ಕೂಗು ಜೀವ ಪಡೆದಿದೆ

Comments are closed.