ರಾಷ್ಟ್ರೀಯ

ಸೀತೆಯನ್ನು ಅಪಹರಿಸಿದ್ದು ಯಾರು? ಉತ್ತರ ರಾವಣನಲ್ಲ, ರಾಮ!

Pinterest LinkedIn Tumblr


ಅಹಮದಾಬಾದ್: ಸೀತೆಯನ್ನು ಅಪಹರಿಸಿದ್ದು ಯಾರು? ಪುಟ್ಟ ಮಗುವನ್ನು ಕೇಳಿದರೂ ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡುತ್ತದೆ. ಆದರೆ ಗುಜರಾತ್‌ನ 12 ನೇ ತರಗತಿಯ ಸಂಸ್ಕೃತ ಪಠ್ಯಪುಸ್ತಕದಲ್ಲಿ ರಾಮಾಯಣದ ಈ ಮೂಲಭೂತ ಸತ್ಯವನ್ನು ಸಹ ತಪ್ಪಾಗಿ ಹೇಳಲಾಗಿದೆ. ಈ ಪುಸ್ತಕದಲ್ಲಿ ಮುದ್ರಿತವಾಗಿರುವ ಒಂದು ಪಾಠದ ಪ್ರಕಾರ, ” ಸೀತೆಯ ಅಪಹರಣಕಾರ ರಾವಣ ಅಲ್ಲ, ಬದಲಾಗಿ ರಾಮ”.

“ಇಲ್ಲಿ ಕವಿ ತನ್ನ ಮೂಲ ಆಲೋಚನೆ ಮತ್ತು ಚಿಂತನೆಯೊಂದಿಗೆ ರಾಮನ ಪಾತ್ರವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಸೀತೆಯನ್ನು ರಾಮ (ರಾವಣ ಬದಲು ರಾಮ ಬಳಸಲಾಗಿದೆ) ಅಪಹರಿಸಿದಾಗ ಲಕ್ಷ್ಮಣ್ ಅದನ್ನು ರಾಮನಿಗೆ ತಿಳಿಸುವ ಸನ್ನಿವೇಶದ ಹೃದಯ ಸ್ಪರ್ಶಿ ವಿವರಣೆ ಇದೆ”, “ಸಂಸ್ಕೃತ ಸಾಹಿತ್ಯದ ಪರಿಚಯ”, ಪುಸ್ತಕದ 106ನೇ ಪುಟದಲ್ಲಿರುವ ಪ್ಯಾರಾವೊಂದರಲ್ಲಿ ಹೀಗೆ ಮುದ್ರಿಸಲಾಗಿದೆ.

ಗುಜರಾತಿ ಭಾಷೆಯಲ್ಲಿರುವ ಪಠ್ಯಪುಸ್ತಕದಲ್ಲಿರುವ ಕಾಳಿದಾಸನ ಕಾವ್ಯ ‘ ರಘುವಂಶ’ದಲ್ಲಿ ಇದನ್ನು ತಪ್ಪಿಲ್ಲದೆ ಮುದ್ರಿಸಲಾಗಿದೆ. ಆದರೆ ಇಂಗ್ಲಿಷ್ ಪುಸ್ತಕದಲ್ಲಿ ಮಾತ್ರ ಈ ಮಹಾ ಪ್ರಮಾದವನ್ನೆಸಗಲಾಗಿದೆ.

ಈ ಕುರಿತು ಪ್ರತಿಕ್ರಿಯಿಸುವಂತೆ ಗುಜರಾತ್ ರಾಜ್ಯ ಪಠ್ಯಪುಸ್ತಕ ಮಂಡಳಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ನಿತಿನ್ ಪೆಠಾನಿ ಅವರನ್ನು ಕೇಳಲಾಗಿ ಮೊದಲಿಗೆ ಅವರು ಈ ತಪ್ಪಿನ ಬಗ್ಗೆ ಅರಿವಿಲ್ಲವೆಂದರು. ಬಳಿಕ ತಪ್ಪನ್ನು ಒಪ್ಪಿಕೊಂಡಿದ್ದಾರೆ.

“ಇದು ಅನುವಾದದಲ್ಲಾಗಿರುವ ದೋಷ, ರಾವಣ ಎಂದಿರಬೇಕಾದ ಜಾಗದಲ್ಲಿ ರಾಮ ಎಂದಾಗಿದೆ, ಗುಜರಾತಿ ಭಾಷೆಯಲ್ಲಿರುವ ಪಠ್ಯಪುಸ್ತಕದಲ್ಲಿ ಈ ತಪ್ಪಿಲ್ಲ,”
ಡಾ. ನಿತಿನ್ ಪೆಠಾನಿ

Comments are closed.