ರಾಷ್ಟ್ರೀಯ

ಭ್ರಷ್ಟ ರಸ್ತೆ ಗುತ್ತಿಗೆದಾರರನ್ನು ಬುಲ್‌ಡೋಜರ್‌ ಎದುರು ಎಸೆಯುತ್ತೇನೆ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ

Pinterest LinkedIn Tumblr


ಬೇತುಲ್‌ : ‘ಭ್ರಷ್ಟ ರಸ್ತೆ ಗುತ್ತಿಗೆದಾರರನ್ನು ಬುಲ್‌ಡೋಜರ್‌ ಎದುರು ಎಸೆಯುತ್ತೇನೆ’ ಎಂದು ಹೇಳಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ವಿವಾದ ಸೃಷ್ಟಿಸಿದ್ದಾರೆ.

‘ರಸ್ತೆ ಗುತ್ತಿಗೆದಾರರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡರೆ ಅವರ ಮೇಲೆ ಬುಲ್‌ಡೋಜರ್‌ ಓಡಿಸಲಾಗುವುದು’ ಎಂದು ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ನಡೆದ ಅಸಂಘಟಿತ ಕಾರ್ಮಿಕರ ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಗಡ್ಕರಿ ಹೇಳಿದರು.

‘ರಸ್ತೆ ಕಾಮಗಾರಿಗಳು ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಗುತ್ತಿಗೆದಾರರು ಸರಿಯಾಗಿ ನೋಡಿಕೊಳ್ಳಬೇಕು; ಒಂದು ವೇಳೆ ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಅವರನ್ನು ಬುಲ್‌ಡೋಜರ್‌ ಎದುರು ಎಸೆಯುತ್ತೇನೆ’ ಎಂದು ಗಡ್ಕರಿ ತಮ್ಮ ಭಾಷಣದಲ್ಲಿ ಎಚ್ಚರಿಕೆ ನೀಡಿದರು.

ರಸ್ತೆ ಗುತ್ತಿಗೆದಾರರು ನಡೆಸುವ ಭ್ರಷ್ಟಾಚಾರವನ್ನು ಸರ್ವಥಾ ಸಹಿಸಲಾಗದು; ಕಾಮಗಾರಿಗೆ ಸಲ್ಲುವ ಹಣವು ಗುತ್ತಿಗೆದಾರರಿಗೆ ಸೇರಿದ್ದಲ್ಲ; ದೇಶದ ಬಡವರಿಗೆ ಸೇರಿದ್ದು ಎಂದು ಗಡ್ಕರಿ ಹೇಳಿದರು.

 

Comments are closed.