ರಾಷ್ಟ್ರೀಯ

16ಕ್ಕೂ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿರುವ ಲಾಲು ಆರೋಗ್ಯ ಮತ್ತೆ ಬಿಗಡಾಯಿಸಿದ್ದು ಇಂದು ಆಸ್ಪತ್ರೆಗೆ ದಾಖಲು!

Pinterest LinkedIn Tumblr


ಪಾಟ್ನಾ: ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಮತ್ತೆ ಬಿಗಡಾಯಿಸಿದ್ದು ಶನಿವಾರ ಮುಂಜಾನೆ ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು 16ಕ್ಕೂ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದ್ದಕ್ಕಿಂದಂತೆ ಅವರಿಗೆ ಎದೆನೋವು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು,. ತಕ್ಷಣಕ್ಕೆ ಅವರನ್ನು ಇಂದಿರಾ ಗಾಂಧಿ ವೈದ್ಯಕೀಯ ಸಂಸ್ಥೆಗೆ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು16ಕ್ಕೂ ಹೆಚ್ಚು ಕಾಯಿಲೆಗಳು ಅವರನ್ನು ಬಾಧಿಸುತ್ತಿವೆ, ಎಂದು ಪಕ್ಷದ ನಾಯಕ ಭೋಲಾ ಯಾದವ್ ತಿಳಿಸಿದ್ದಾರೆ.

3 ದಿನಗಳ ಪೆರೋಲ್ ಮೇಲೆ ಕಳೆದ ವಾರ ಲಾಲು ಮಗನ ಮದುವೆಗೆ ಆಗಮಿಸಿದ್ದರು. ಅದರ ಜತೆಗೆ ವೈದ್ಯಕೀಯ ಕಾರಣಗಳಿಗಾಗಿ ಜಾರ್ಖಂಡ್‌ ಹೈಕೋರ್ಟ್‌ 6 ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿತ್ತು.

ಮೇವು ಹಗರಣಕ್ಕೆ ಸಂಬಂಧಿಸಿದಂತೆ 14 ವರ್ಷ ಶಿಕ್ಷೆಗೊಳಗಾಗಿರುವ ಲಾಲು ಅವರು ಕಳೆದ ಡಿಸೆಂಬರ್ 23, 2017ರಿಂದ ಜೈಲುವಾಸವನ್ನು ಅನುಭವಿಸುತ್ತಿದ್ದಾರೆ.

ಕಳೆದ ಮಾರ್ಚ್ 17 ರಂದು ಸಹ ಅನಾರೋಗ್ಯದ ಕಾರಣದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

Comments are closed.