ದಾದ್ರಿ (ಉತ್ತರ ಪ್ರದೇಶ): ವರದಕ್ಷಿಣೆ ವಿಚಾರದಲ್ಲಿ ಜಟಾಪಟಿಯಲ್ಲಿ ವಧುವಿನ ಮನೆಯವರು ತಮ್ಮ ಅಳಿಯನನ್ನೇ ಒತ್ತೆಯಾಳಾಗಿರಿಸಿಕೊಂಡಿದ್ದಾರೆ.
ಮದುವೆ ದಿನ 2 ಕುಟುಂಬದ ನಡುವೆ ನಡೆದ ವಾಗ್ವಾದದಿಂದ ಗಂಡಿನ ಕುಟುಂಬ ಮದು ಮಕ್ಕಳನ್ನು ಬಿಟ್ಟು ವಾಪಾಸಾಗಿದ್ದಾರೆ. ವಿವಾದವನ್ನು ಇತ್ಯರ್ಥಗೊಳಿಸಲು 2 ಗ್ರಾಮದ ಸರಪಂಚ್‌ಗಳು ಆಗಮಿಸಬೇಕಿರುವುದರಿಂದ ಕಳೆದ 3 ದಿನದಿಂದ ವಧುವಿನ ಮನೆಯಲ್ಲೇ ವರ ಸೆರೆಯಾಳಾಗಿ ಉಳಿದಿದ್ದಾನೆ.
ಉತ್ತರ ಪ್ರದೇಶದ ಧಹನ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹುಡುಗಿ ಕಡೆಯಿಂದ 60 ಸಾವಿರ ರೂ. ವರದಕ್ಷಿಣೆ ನೀಡದೇ ಇದ್ದುದಕ್ಕೆ ವರನ ಕುಟುಂಬ ವಾಗ್ವಾದಕ್ಕೆ ಇಳಿದಿದೆ. ತೀವ್ರ ವಾಗ್ವಾದದ ಬಳಿಕ ವರ ಕುಟುಂಬ ವಧುವನ್ನು ಬಿಟ್ಟು ಹಿಂದಿಗುರಿಗಿದೆ. ಈ ವೇಳೆ ವರ ಹಾಗೂ ಮೂವರು ಕುಟುಂಬ ಸದಸ್ಯರನ್ನು ವಧುವಿನ ಕುಟುಂಬ ಸದಸ್ಯರು ಒತ್ತೆಯಾಳಾಗಿರಿಸಿದ್ದಾರೆ.
ಇದೀಗ ವಧು ಈ ಮದುವೆ ಬೇಡವೆಂದಿದ್ದು, ಗುರುವಾರದ ವರೆಗೆ ಹುಡುಗನ ಕಡೆಯವರು ಮಾತುಕತೆಗೆ ಬರದೇ ಹೋದಲ್ಲಿ, ವಧುವಿನ ಕುಟುಂಬ ನಾಲ್ವರನ್ನು ಪೊಲೀಸರ ವಶಕ್ಕೆ ಒಪ್ಪಿಸುವುದಾಗಿ ತಿಳಿಸಿದೆ ಎನ್ನಲಾಗಿದೆ. ಈಗಾಗಲೇ ವರನಿಗೆ 1.12 ಲಕ್ಷ ರೂ.ಗಳನ್ನು ವರದಕ್ಷಿಣೆ ನೀಡಲಾಗಿದ್ದು, ಮತ್ತೆ ಹಣ ಕೇಳುತ್ತಿರುವುದಕ್ಕೆ ಹುಡುಗಿಯ ಕುಟುಂಬ ಆಕ್ಷೇಪ ವ್ಯಕ್ತಪಡಿಸಿದ್ದರು.
ಘಟನೆ ಕುರಿತು ಜಿಲ್ಲಾಡಳಿತ ಪ್ರತಿಕ್ರಿಯೆ ನೀಡಿದ್ದು, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
Comments are closed.