ಕರ್ನಾಟಕ

ವಾಲ್‌ ಮಾರ್ಟ್‌ ನಿಂದ ಫ್ಲಿಪ್‌ಕಾರ್ಟ್‌ನ ಶೇ. 77ರಷ್ಟು ಷೇರು: ಕೋಟ್ಯಧಿಪತಿಗಳಾದ ಉದ್ಯೋಗಿಗಳು

Pinterest LinkedIn Tumblr


ಬೆಂಗಳೂರು: ದೇಶದ ಅತಿದೊಡ್ಡ ಇ- ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನ ಶೇ. 77ರಷ್ಟು ಷೇರುಗಳನ್ನು ಅಮೆರಿಕದ ವಾಲ್‌ಮಾರ್ಟ್ ಸಂಸ್ಥೆ ಖರೀದಿಸಿದೆ. ಹೀಗಾಗಿ ಫ್ಲಿಪ್‌ಕಾರ್ಟ್‌ ಸಂಸ್ಥೆಯ ಸಾವಿರಾರು ಷೇರುದಾರರು ಕೋಟ್ಯಧಿಪತಿಗಳು ಅಥವಾ ಡಾಲರ್ ಮಿಲಿಯನೇರ್‌ಗಳಾಗಲಿದ್ದಾರೆ. ಫ್ಲಿಪ್‌ಕಾರ್ಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಹಾಗೂ ಮಾಜಿ ಉದ್ಯೋಗಿಗಳು ಶ್ರೀಮಂತರಾಗಲಿದ್ದಾರೆ. ಯಾಕೆಂದ್ರೆ, 1 ಷೇರಿಗೆ 150 ಡಾಲರ್ ಅಂದ್ರೆ 10 ಸಾವಿರ ರೂ. ಷೇರು ಮೌಲ್ಯದಂತೆ ಷೇರುಗಳನ್ನು ವಾಪಸ್ ಕೊಂಡುಕೊಳ್ಳಲಾಗುವುದು ಎಂದು ಫ್ಲಿಪ್‌ಕಾರ್ಟ್‌ ಗ್ರೂಪ್ ಸಿಇಒ ಬಿನ್ನಿ ಬನ್ಸಾಲ್ ಘೋಷಿಸಿದ್ದಾರೆ.

ಫ್ಲಿಪ್‌ಕಾರ್ಟ್‌ ಕಂಪನಿಯಲ್ಲಿ ಸುಮಾರು 10 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, 3 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಮಾಜಿ ಉದ್ಯೋಗಿಗಳು ಷೇರುಗಳನ್ನು ಹೊಂದಿದ್ದಾರೆ. ಈ ಪೈಕಿ, ಸಮೀರ್ ನಿಗಮ್‌, ಅಮೋದ್ ಮಾಳವಿಯಾ, ಸುಜೀತ್ ಕುಮಾರ್, ಅಂಕಿತ್ ನಗೋರಿ, ಮೇಕಿನ್ ಮಹೇಶ್ವರಿ, ಫೌನ್ಹಾವ್‌ ಗುಪ್ತಾ, ಅನಂತ ನಾರಾಯಣನ್‌ ಕೋಟ್ಯಧಿಪತಿಗಳಾಗಲಿದ್ದಾರೆ ಎನ್ನಲಾಗಿದೆ.

ಉದ್ಯೋಗಿಗಳಿಗೆ ಸ್ಟಾಕ್ ಆಯ್ಕೆಗಳನ್ನು ನೀಡುವಲ್ಲಿ ಫ್ಲಿಪ್‌ಕಾರ್ಟ್‌ ಸಾಕಷ್ಟು ಉದಾರವಾಗಿತ್ತು. ಇನ್ನು, 1990 ರ ದಶಕ ಹಾಗೂ 2000ರ ದಶಕದಲ್ಲಿ ಇನ್ಫೋಸಿಸ್‌ ಕಂಪನಿ 20 ಸಾವಿರ ರೂಪಾಯಿ ಮಿಲಿಯನೇರ್‌ಗಳು ಹಾಗೂ 500 ಡಾಲರ್ ಮಿಲಿಯನೇರ್‌ಗಳನ್ನು ಹುಟ್ಟಿಹಾಕಿತ್ತು. ಫ್ಲಿಪ್‌ಕಾರ್ಟ್‌ನ ಶೇ. 77 ಷೇರುಗಳನ್ನು ವಾಲ್‌ಮಾರ್ಟ್ ಖರೀದಿ ಮಾಡಿದ್ದು, ಉಳಿದ ಶೇ. 23 ಷೇರುಗಳನ್ನು ಫ್ಲಿಪ್‌ಕಾರ್ಟ್‌ನ ಮೂಲ ಷೇರುದಾರರು, ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್, ಚೀನಾದ ಟೆನ್‌ಸೆಂಟ್‌ ಹೋಲ್ಡಿಂಗ್ಸ್‌, ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಮತ್ತು ಮೈಕ್ರೋಸಾಫ್ಟ್‌ ಕಾರ್ಪೋರೇಷನ್ ಹೊಂದಿದೆ.

Comments are closed.