ಕರ್ನಾಟಕ

ಅತಿ ಅಪರೂಪದ ರಕ್ತದ ಗುಂಪು ಹೊಂದಿದ್ದ 35 ವರ್ಷದ ಯುವಕನ ಜೀವ ಉಳಿಸಲು 200 ಕಿ.ಮೀ ಪ್ರಯಾಣ

Pinterest LinkedIn Tumblr


ಬೆಂಗಳೂರು: ಅತಿ ಅಪರೂಪದ ರಕ್ತದ ಗುಂಪು ಹೊಂದಿದ್ದ 35 ವರ್ಷದ ಯುವಕನ ಜೀವ ಉಳಿಸಲು ದಾನಿಯೋರ್ವರು 200 ಕಿ.ಮೀ ದೂರ ಸಾಗಿ ರಕ್ತದಾನ ಮಾಡಿದ್ದಾರೆ.

58 ವರ್ಷದ ಮಲ್ಲೇಶ್ವರ ನಿವಾಸಿ ಶ್ರೀಧರ್‌, ರಕ್ತದಾನಕ್ಕಾಗಿ ಮಲ್ಲೇಶ್ವರದಿಂದ ವೆಲ್ಲೂರಿಗೆ ಸಾಗಿದ್ದಾರೆ. ತಮಿಳುನಾಡಿನ ಪರಮಕೆಮುಂಡಿಯ ನಿವಾಸಿ ಸಿಂಹಾದ್ರಿ ಪೊಲಕಿ ಅತಿ ಅಪರೂಪದ ರಕ್ತಗುಂಪಾದ ಎಬಿಒ(ಬಾಂಬೆ ಬ್ಲಡ್‌ ಗ್ರೂಪ್‌) ಹೊಂದಿದ್ದು, ತಲಸ್ಲೇಮಿಯಾದಿಂದ ಬಳಲುತ್ತಿದ್ದರು. ಇದೇ ರಕ್ತದ ಗುಂಪು ಹೊಂದಿರುವ ಶ್ರೀಧರ್‌, ಈ ವರೆಗೆ ಪರಿಚಯವೇ ಇಲ್ಲದ ಪೊಲಕಿಗೆ ರಕ್ತದಾನ ಮಾಡಲು ಏಕಾಏಕಿ ವೆಲ್ಲೂರಿಗೆ ತೆರಳಿದ್ದಾರೆ.

ಈ ರೀತಿಯ ರಕ್ತ ಗುಂಪು ಹೊಂದಿರುವವರಿಗೆ ಅದೇ ಗುಂಪಿನ ರಕ್ತ ಮಾತ್ರ ದಾನವಾಗಿ ಪಡೆಯಬಹುದು. ಆದರೆ ದೇಶದಲ್ಲಿ ಒಟ್ಟಾರೆ ಈ ರಕ್ತದ ಗುಂಪಿನ ರಕ್ತ ಹೊಂದಿರುವವರು ಬೆರಳೆಣಿಕೆ ಮಂದಿ ಮಾತ್ರ. ಶ್ರೀಧರ್‌ ಈ ಹಿಂದೆ ರಕ್ತ ದಾನಕ್ಕಾಗಿಯೇ ತಿರುಪತಿ, ಹೈದರಾಬಾದ್‌, ಚೆನ್ನೈ ಹಾಊ ಕೊಯಮತ್ತೂರಿಗೆ ತೆರಳಿದ್ದರು. ಹೃದಯ ಶಸ್ತ್ರಚಿಕಿತ್ಸೆ, ತಲಸ್ಲೇಮಿಯಾ, ರಕ್ತದ ಕ್ಯಾನ್ಸರ್‌ ಇನ್ನಿತರ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ರಕ್ತದಾನ ಮಾಡಿದ್ದಾರೆ.

ಬಾಂಬೆ ಬ್ಲಡ್‌ ಗ್ರೂಪ್‌ ಎಂದರೇನು?
ಭಾರತದ ಪೂರ್ವ ಭಾಗದಲ ಜನರಲ್ಲಿ ಈ ಅತಿ ಅಪರೂಪದ ರಕ್ತದ ಗುಂಪು ಕಾಣಬಹುದು. ಪ್ರಥಮ ಬಾರಿಗೆ ಮುಂಬಯಿಯಲ್ಲಿ ಈ ಗುಂಪನ್ನು ಆವಿಷ್ಕರಿಸಲಾಗಿದ್ದ ಹಿನ್ನೆಲೆಯಲ್ಲಿ ಈ ರಕ್ತದ ಗುಂಪಿಗೆ ಬಾಂಬೆ ಬ್ಲಡ್‌ ಗ್ರೂಪ್‌ ಎನ್ನುತ್ತಾರೆ. ರಕ್ತದಲ್ಲಿನ ಎಚ್‌ ಏಜೆಂಟ್‌ ಇರುವುದಿಲ್ಲ. ಇದನ್ನು ಎಬಿಒ ಗ್ರೂಪ್‌ ಎಂದು ವರ್ಗೀಕರಣ ಮಾಡಲಾಗಿದೆ.

Comments are closed.