ರಾಷ್ಟ್ರೀಯ

ಸಮಯಕ್ಕೆ ಸರಿಯಾಗಿ ಬಂದ ಪೊಲೀಸರಿಂದ ಮಹಿಳೆಯ ಜೀವ ರಕ್ಷಣೆ

Pinterest LinkedIn Tumblr


ಲಖನೌ: ಅತ್ತೆ ಮಾವನ ಕಾಟದಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸ್‌ ರೆಸ್ಪಾನ್ಸ್‌ ವೆಹಿಕಲ್‌(ಪಿಆರ್‌ವಿ)ನ ಸಬ್‌ ಕಮಾಂಡರ್‌ ನೀರಜ್‌ ಕುಮಾರ್‌, ಮುಖ್ಯಪೇದೆ ಬ್ರಿಜ್‌ ಸಿಂಗ್‌ ಹಾಗೂ ಸಿಬ್ಬಂದಿ 10 ನಿಮಿಷಗಳಲ್ಲಿ ಮಹಿಳೆಯ ಮನೆ ತಲುಪಿದ್ದು, ನೇಣು ಹಾಕಿಕೊಳ್ಳಲು ಸಿದ್ಧವಾಗಿದ್ದವಳನ್ನು ರಕ್ಷಿಸಿದ್ದಾರೆ.

ಠಾಕೂರ್ಗಂಜ್‌ನ ಮನೆಯೊಂದಲ್ಲಿ ವಾಸವಿರುವ ರಾಧಾ ಸಿಂಗ್‌ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ. ಭಾನುವಾರ ರಾತ್ರಿ ರಾಧಾ ಸಿಂಗ್‌ಗೆ ಅತ್ತೆ- ಮಾವ ಹಲ್ಲೆ ನಡೆಸಿದ್ದು ಇದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಅತ್ತೆ-ಮಾವನ ಉಪಟಳದಿಂದ ಬೇಸತ್ತಿದ್ದು, ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತುರ್ತು ಸಂಖ್ಯೆ 100ಕ್ಕೆ ಕರೆ ಮಾಡಿದ್ದಾಳೆ.

ಕಂಟ್ರೋಲ್‌ ರೂಂನಿಂದ ಮಹಿಳೆಯ ಕರೆಯ ವಿವರಗಳನ್ನು ಪಿಆರ್‌ವಿ 0486 ವಾಹನಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ ರಾಧಾಳ ಕರೆಯನ್ನು ವರ್ಗಾವಣೆ ಮಾಡಲಾಗಿದೆ. ಈ ಸಂದರ್ಭ ವಾಹನದಲ್ಲಿದ್ದ ಬ್ರಿಜ್‌ಸಿಂಗ್‌ ರಾಧಾಳಲ್ಲಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಲು ಯತ್ನಿಸಿದ್ದಾರೆ.

ರಾಧಾ ಮನೆಯಲ್ಲಿ ಕೊಠಡಿಯೊಳಕ್ಕೆ ತೆರಳಿದ್ದು, ನೇಣು ಹಾಕಿಕೊಳ್ಳಲು ಸಿದ್ಧವಾಗುತ್ತಿದ್ದರು. ಅಲ್ಲದೆ ಪತಿಯನ್ನು ಮನೆಯಿಂದ ಹೊರಗೆ ಕಳುಸಿ, ಚಿಲಕ ಹಾಕಿಕೊಂಡಿದ್ದಾಳೆ. ಈ ವೇಳೆಗೆ ಪೊಲೀಸರು ಆಗಮಿಸಿದ್ದು, ಬಾಗಿಲು ಒಡೆದು ರಾಧಾಳನ್ನು ರಕ್ಷಿಸಿದ್ದಾರೆ. ರಾಧಾ ಈ ಹಿಂದೆ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದು, ಬಳಿಕ ರಾಜಿಯಲ್ಲಿ ಇತ್ಯರ್ಥಗೊಂಡಿತ್ತು. ಅಲ್ಲದೆ 6 ತಿಂಗಳ ಹಿಂದೆಯೇ ರಾಧಾ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಮೂಲವರದಿ : ನವಭಾರತಟೈಮ್ಸ್‌

Comments are closed.