ರಾಷ್ಟ್ರೀಯ

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ ಎಚ್ಚರ!

Pinterest LinkedIn Tumblr


ದೆಹಲಿ: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ ಅನಗತ್ಯ ಕಡಿತಗಳನ್ನು ತೋರಿಸುವ ವೇತನದಾರರಿಗೆ ಮೂಗುದಾರ ಹಾಕಲು ಹೊರಟಿರುವ ಆದಾಯ ತೆರಿಗೆ ಇಲಾಖೆ ಅಂಥ ಪ್ರಕರಣಗಳನ್ನು ಕಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಬೆಂಗಳೂರಿನಲ್ಲಿರುವ ಕೇಂದ್ರ ಆದಾಯ ತೆರಿಗೆ ಇಲಾಖೆಯ ಸಂಸ್ಕರಣ ಕೇಂದ್ರ ಈ ಬಗ್ಗೆ ವರದಿಯನ್ನು ಹೊರಡಿಸಿದ್ದು, ಸುಳ್ಳು ಮಾಹಿತಿ ನೀಡಿ ಆದಾಯ ತೆರಿಗೆ ಪಾವತಿಯಲ್ಲಿ ಕಡಿಮೆ ಹಾಗೂ ಅದಕ್ಕಾಗಿ ಸಲಹೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಇದನ್ನು ಎಚ್ಚರಿಕೆಯ ಸಲಹೆ ಎಂದಿರುವ ಇಲಾಖೆ ಇಂಥ ಸುಳ್ಳು ಮಾಹಿತಿ ನೀಡಿ ಆದಾಯ ತೆರಿಗೆ ಪಾವತಿಯಲ್ಲಿ ಕಡಿತ ಮಾಡಲು ಅವಕಾಶ ಇಲ್ಲ . ಅಲ್ಲದೇ ಇಂಥ ಪ್ರಕರಣಗಳಿಗೆ ಆದಾಯ ತೆರಿಗೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅನ್ವಯ ಶಿಕ್ಷಿಸಲು ಅವಕಾಶ ಇದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.

ವೇತನದಾರರು ತೆರಿಗೆ ರಿಟರ್ನ್ ಫೈಲ್ ಮಾಡುವ ಸಮಯ ಆರಂಭವಾಗಿದ್ದು, ಅದಕ್ಕಿಂತ ಮುಂಚಿತವಾಗಿ ಈ ಆದೇಶ ಹೊರಬಿದ್ದಿದ್ದು, ಅನಾವಶ್ಯ ಹಾಗೂ ಸುಳ್ಳು ಖರ್ಚು ತೋರಿಸಿ ತೆರಿಗೆ ವಿನಾಯಿತಿ ಪಡೆಯುವವರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

Comments are closed.