ಕರ್ನಾಟಕ

ತರೀಕೆರೆಯಲ್ಲಿ ಭಾರಿ ಮಳೆ: ಬಿತ್ತು ಭಾರಿ ಗಾತ್ರದ ಆಲಿಕಲ್ಲು

Pinterest LinkedIn Tumblr


ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆಯಲ್ಲಿ ಗುಡುಗು-ಸಿಡಿಲು, ಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಿದೆ. ಸಂಜೆ ನಾಲ್ಕು ಗಂಟೆಯಿಂದ ಆರಂಭವಾದ ಮಳೆ ಸುಮಾರು ಒಂದು ಗಂಟೆಯ ಕಾಲ ಎಡೆಬಿಡದೆ ಸುರಿದಿದೆ.

ಭಾರಿ ಗಾತ್ರದ ಆಲಿಕಲ್ಲು ಬಿದ್ದಿದೆ. 15 ಕೆ.ಜಿ.ಯ 3 ಆಲಿಕಲ್ಲು, 10 ಕೆ.ಜಿ.ಯ 2 ಆಲಿಕಲ್ಲು ಕೂಡ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತರೀಕೆರೆಯ ಸುತ್ತಮುತ್ತ ಸುರಿದ ಭಾರಿ ಮಳೆಗೆ ಗ್ರಾಮೀಣ ಭಾಗದ ಜನಜೀವನ ಅಸ್ತವ್ಯಸ್ತವಾಗುವ ಜೊತೆ ಖುಷಿಯೂ ಆಗಿದೆ. ಭಾರಿ ಮಳೆ ಗಾಳಿಗೆ ಅಡಕೆ ಹಾಗೂ ತೆಂಗಿನ ಮರಗಳು ಅರ್ಧಕ್ಕೆ ಮುರಿದು ಬಿದ್ದಿವೆ.

ತರೀಕೆರೆ ತಾಲೂಕಿನ ವಿಟ್ಲಾಪುರ ಗ್ರಾಮದಲ್ಲಿ ಮದುವೆಗೆಂದು ಹಾಕಿದ್ದ ಶಾಮಿಯಾನ ಕೂಡ ಹಾರಿ ಹೋಗಿದೆ. ಸಂಜೆ ಆರತಕ್ಷತೆಗೆಂದು ಹಾಕಿದ್ದ ಸ್ಟೇಜ್ ಕೂಡ ಭಾರಿ ಮಳೆ-ಗಾಳಿಗೆ ಹಾರಿ ಹೋಗಿದೆ.

ಮಳೆಯ ಅವಾಂತರದಿಂದ ಮದುವೆಯ ಆರತಕ್ಷತೆಯ ಸ್ಥಳಾಂತರ ಮಾಡಿದ್ದಾರೆ. ತಾಲೂಕಿನ ಲಕ್ಕವಳ್ಳಿ ಭಾಗದಲ್ಲೂ ಭಾರಿ ಮಳೆಯಾಗಿದ್ದು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

Comments are closed.