ಕ್ರೀಡೆ

ಕ್ರಿಸ್ ಗೇಯ್ಲ್ ಸ್ಪೋಟಕ ಬ್ಯಾಟಿಂಗ್’ಗೆ ಶರಣಾದ ಸನ್ ರೈಸರ್ಸ್ ಹೈದರಾಬಾದ್; ಪಂಜಾಬಿಗೆ ಭರ್ಜರಿ ಜಯ

Pinterest LinkedIn Tumblr

ಮೊಹಾಲಿ: ಮೊಹಾಲಿಯಲ್ಲಿ ಗುರುವಾರ ನಡೆದ ಕಿಂಗ್ಸ್​ ಇಲೆವೆನ್​ ಪಂಜಾಬ್​ ಮತ್ತು ಸನ್​ ರೈಸರ್ಸ್​ ಹೈದರಾಬಾದ್​ ನಡುವಿನ ಐಪಿಎಲ್​ ಟಿ20 ಪಂದ್ಯದಲ್ಲಿ ಪಂಜಾಬ್​ ತಂಡ 15 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಆರಂಭಿಕ ಆಟಗಾರ ಕ್ರಿಸ್ ಗೇಯ್ಲ್ ಸಿಡಿಸಿದ ಅಬ್ಬರದ ಶತಕದ ನೆರವಿನಿಂದ ಪಂಜಾಬ್ ತಂಡ ಹೈದರಾಬಾದ್ ಗೆ ಗೆಲ್ಲಲು 194 ರನ್ ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಹತ್ತಿದೆ ಹೈದರಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಪಂಜಾಬ್ ಎದುರು 15 ರನ್ ಗಳ ಅಂತರದಲ್ಲಿ ಸೋಲು ಕಂಡಿತು.

ಕಳೆದ ಮೂರು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಜಯ ಕಂಡಿದ್ದ ಹೈದರಾಬಾದ್ ಗೆ ಇದು ಮೊದಲ ಸೋಲಾಗಿದೆ.

ಆರಂಭಿಕ ಆಘಾತದ ಹೊರತಾಗಿಯೂ ಹೈದರಾಬಾದ್ ಪರ ಶಿಖರ್ ಧವನ್ (54 ರನ್) ಮತ್ತು ಮನೀಷ್ ಪಾಂಡೆ (ಅಜೇಯ 57 ರನ್)ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಸ್ಫೋಟಕ ಆಟವಾಡುತ್ತಿದ್ದ ಧವನ್ ಗಾಯದ ಸಮಸ್ಯೆಯಿಂದಾಗಿ ಕ್ರೀಸ್ ಬಿಟ್ಟು ಹೊರ ನಡೆದರು.

ಇನ್ನು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡಕ್ಕೆ ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ಬೆನ್ನೆಲುಬಾಗಿ ನಿಂತರು. ತಂಡ ಗಳಿಸಿದ 193 ರನ್ ಗಳ ಪೈಕಿ ಗೇಯ್ಲ್ ಒಬ್ಬರೇ 104 ರನ್ ಪೇರಿಸಿದ್ದರು. ಉಳಿದಂತೆ ಕರುಣ್ ನಾಯರ್ 31 ರನ್ ಸೇರಿಸಿ ತಂಡದ ಮೊತ್ತ 190ರ ಗಡಿ ದಾಟುವಂತೆ ನೋಡಿಕೊಂಡರು.

Comments are closed.