ರಾಷ್ಟ್ರೀಯ

ಶಸ್ತ್ರಧಾರಿಗಳಿಂದ ಕಾರು ಅಪಹರಣ: ಪಠಾಣ್‌ಕೋಟ್‌ನಲ್ಲಿ ಹೈ ಅಲರ್ಟ್‌

Pinterest LinkedIn Tumblr


ಪಠಾಣ್‌ ಕೋಟ್‌: ನಗರದಲ್ಲಿ ಬುಧವಾರ ರಾತ್ರಿ ಸೇನಾ ಸಮವಸ್ತ್ರದಲ್ಲಿದ್ದ ಇಬ್ಬರು ಶಸ್ತ್ರಧಾರಿಗಳು ಕಾರೊಂದನ್ನು ಅಪಹರಿಸಿರುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದು, ಆ ಬಳಿಕ ವಾಯುನೆಲೆ ಮತ್ತು ನಗರದಾಧ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ.

ಕಾರು ಹೈಜಾಕ್‌ ಮಾಡಿರುವ ಕಾರಣ ಎಲ್ಲೆಡೆ ತಪಾಸಣೆ ನಡೆಸಲಾಗುತ್ತಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ವಾಯುನೆಲೆಯ ಸುತ್ತಮುತ್ತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.

2016 ರ ಜನವರಿ 2ರಂದು ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ಉಗ್ರರು ಹೊಂಚು ದಾಳಿ ನಡೆಸಿ ಅಟ್ಟಹಾಸ ಗೈದಿದ್ದರು.

-ಉದಯವಾಣಿ

Comments are closed.