ರಾಷ್ಟ್ರೀಯ

ದಿನಕ್ಕೆ 2,500 ಕೋಟಿ ರೂಪಾಯಿಯಷ್ಟು 500 ರೂ. ನೋಟು ಮುದ್ರಣ

Pinterest LinkedIn Tumblr


ಹೊಸದಿಲ್ಲಿ: ದೇಶದೆಲ್ಲೆಡೆ ಕಂಡುಬಂದಿರುವ ನೋಟುಗಳ ಕೊರತೆ ನೀಗಿಸಲು ಕೇಂದ್ರ ಸರಕಾರ ಕೆಲವು ಉಪಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ದೇಶಾದ್ಯಂತ ಎಟಿಎಂಗಳಲ್ಲಿ ನೋಟುಗಳೇ ಇಲ್ಲದಂತಾಗಿದೆ. ಎಲ್ಲೆಡೆಯೂ ನೋ ಕ್ಯಾಷ್‌ ಬೋರ್ಡ್‌ ರಾರಾಜಿಸುತ್ತಿದೆ.

ನೋಟುಗಳ ಕೊರತೆ ನೀಗಿಸಲು ಈಗ ಕೇಂದ್ರ ಸರಕಾರ ಪರ್ಯಾಯ ಕ್ರಮಕ್ಕೆ ಮುಂದಾಗಿದೆ.

500 ರೂಪಾಯಿ ನೋಟುಗಳ ಮುದ್ರಣವನ್ನು ಐದು ಪಟ್ಟು ಹೆಚ್ಚಳ ಮಾಡಲು ಕೇಂದ್ರ ಸರಕಾರ ಮುಂದಾಗಿದೆ.

ಮಂಗಳವಾರ ಈ ವಿಷಯವನ್ನು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

ಸದ್ಯ ದಿನಕ್ಕೆ 500 ನೋಟುಗಳನ್ನು 500 ಕೋಟಿ ರೂಪಾಯಿಯಷ್ಟು ಮುದ್ರಣ ಮಾಡಲಾಗುತ್ತಿದೆ. ಇದನ್ನು ಐದು ಪಟ್ಟು ಹೆಚ್ಚಳ ಮಾಡಲಾಗುವುದು ಎಂದು ಆರ್ಥಿಕ ವ್ಯವಹಾರ ಇಲಾಖೆ ಕಾರ್ಯದರ್ಶಿ ಎಸ್.ಸಿ. ಗಾರ್ಗ್‌ ತಿಳಿಸಿದ್ದಾರೆ.

ಐದು ಪಟ್ಟು ಹೆಚ್ಚಳವಾದರೆ ದಿನಕ್ಕೆ 2,500 ಕೋಟಿ ರೂಪಾಯಿಷ್ಟು ನೋಟುಗಳು ಮುದ್ರಣವಾಗಲಿದೆ. ತಿಂಗಳಿಗೆ 70 ಸಾವಿರದಿಂದ 75 ಸಾವಿರ ಕೋಟಿ ರೂಪಾಯಿ ನೋಟುಗಳು ಚಲಾವಣೆಗೆ ಸಿದ್ಧವಾಗಲಿವೆ ಎಂದು ಅವರು ಮಾಹಿತಿ ನೀಡಿದರು.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಬಿಹಾರ, ಮಧ್ಯಪ್ರದಶ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ನೋಟುಗಳ ಕೊರತೆ ಬಗ್ಗೆ ದೂರುಗಳ ಕೇಳಿಬಂದ ಹಿನ್ನೆಲೆಯಲ್ಲಿ ಮಂಗಳವಾರ ತುರ್ತು ಸಭೆ ನಡೆಸಲಾಯಿತು.

ಇನ್ನೂ ಕೆಲವು ರಾಜ್ಯಗಳಲ್ಲಿ ನೋಟುಗಳ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ.

ಅರುಣ್‌ ಜೇಟ್ಲಿ ಕೂಡ ಮಂಗಳವಾರ ಈ ಕುರಿತು ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿ, ತಾತ್ಕಾಲಿಕ ಕೊರತೆ ಉಂಟಾಗಿದೆ ನಿಜ. ಅದನ್ನು ತ್ವರಿತ ಗತಿಯಲ್ಲಿ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

Comments are closed.