ಕರ್ನಾಟಕ

ಓವೈಸಿಯಲ್ಲ, ಸಿದ್ದರಾಮಯ್ಯನೇ ಕೋಮುವಾದಿ ಎಂದ ಎಚ್.ಡಿ. ಕುಮಾರಸ್ವಾಮಿ

Pinterest LinkedIn Tumblr


ವಿರಾಜಪೇಟೆ: ಎಐಎಂಇಐಎಂ ಅಧ್ಯಕ್ಷ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕೋಮುವಾದಿ ಎಂದು ಹೇಳುವುದಕ್ಕಾಗಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನೇ ಕೋಮುವಾದಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ವಿರಾಜಪೇಟೆಯಲ್ಲಿ ನಡೆದ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೆಡಿಎಸ್-ಬಿಜೆಪಿ ಕೈಜೋಡಿಸಿದೆ ಎಂದು ಕಾಂಗ್ರೆಸ್ನ ‘ಪಾಪ ಪಾಂಡು’ ಹೇಳಿಬಿಟ್ಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದರು.

ಈ ಬಾರಿ ಜೆಡಿಎಸ್ ಕಿಂಗ್ ಆಗುತ್ತದೆ. ಕಿಂಗ್ ಮೇಕರ್ ಅಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಗೆಲುವು ಸಿಗುವುದರಲ್ಲಿ ಅನುಮಾನವಿಲ್ಲ. ನಾಳೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡುವಾಗ ಕಾಫಿ ಬೆಳೆಗಾರರ ಸಮಸ್ಯೆಯನ್ನು ಜೆಡಿಎಶ್ ಗಂಭೀರವಾಗಿ ಪರಿಗಣಿಸಲಿದೆ. ಕೊಡಗಿನ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ಚುನಾವಣೆ ಸಂಬಂಧ ಯಾವುದೇ ಸಮೀಕ್ಷೆ ಬಗ್ಗೆ ತಲೆನೋವಿಲ್ಲ. ಇಂದಿನ ಸಮೀಕ್ಷೆಗಳೇ ಅಂತಿಮವಲ್ಲ ಎಂದು ಹೇಳಿದ ಕುಮಾರಸ್ವಾಮಿ ಅವರು, ಪ್ರಜ್ವಲ್ ರೆವ್ವಣ್ಣಗೆ ಟಿಕೆಟ್ ಬೇಡ ಎಂದು ಈಗಾಗಲೇ ಹೇಳಿದ್ದೇನೆ. ಮುಂದಿನ ದಿನದಲ್ಲಿ ನೋಡೋಣ ಎಂದು ಹೇಳಿದರು.

ಮಗನ ಯಾವ ಸಾಧನೆ ನೋಡಿ ಟಿಕೆಟ್ ಕೊಡಿಸಿದ್ದಾರೆ ಸಿದ್ದರಾಮಯ್ಯ

ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದು ಹೇಳುತ್ತಿದ್ದವರು, ಈಗ ಏನು ಉತ್ತರ ಕೊಡುತ್ತಾರೆ. ನಿಮ್ಮ ಮಗನ ಯಾವ ಸಾಧನೆ ನೋಡಿ ಟಿಕೆಟ್ ಕೊಡಿಸಿದ್ದೀರಾ ಸಿಎಂ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

Comments are closed.