ರಾಷ್ಟ್ರೀಯ

ಸಲ್ಮಾನ್‌ ಖಾನ್‌ ವಿದೇಶ ಪ್ರವಾಸಕ್ಕೆ ಜೋಧ್‌ಪುರ ನ್ಯಾಯಾಲಯದ ಅನುಮತಿ

Pinterest LinkedIn Tumblr


ಹೊಸದಿಲ್ಲಿ: ಇಪ್ಪತ್ತು ವರ್ಷಗಳ ಹಿಂದೆ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಜಾಮೀನು ಪಡೆದು ಹೊರ ಬಂದ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ನಾಲ್ಕು ದೇಶಗಳ ಸಂದರ್ಶನಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳಲು ಜೋಧ್‌ಪುರ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಲಯ, ಜಾಮೀನಿನ ಶರತ್ತಿನ ಪ್ರಕಾರ, ಅನುಮತಿ ನೀಡಿದೆ.

1998ರಲ್ಲಿ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ಗೆ ಎಪ್ರಿಲ್‌ 7ರಂದು ಜಾಮೀನು ಮಂಜೂರಾಗಿತ್ತು. 25,000 ರೂ.ಗಳ ಎರಡು ಬೇಲ್‌ ಬಾಂಡ್‌ ಆಧಾರದಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು.

ಜಾಮೀನು ಸಿಗುವ ಮುನ್ನ ಸಲ್ಮಾನ್‌ ಖಾನ್‌ ಜೋಧ್‌ಪುರ ಜೈಲಿನಲ್ಲಿ ಎರಡು ರಾತ್ರಿಗಳನ್ನು ಕಳೆದಿದ್ದರು. ಜಾಮೀನಿನ ಶರತ್ತಿನ ಪ್ರಕಾರ ಸಲ್ಮಾನ್‌ ವಿದೇಶ ಪ್ರವಾಸ ಕೈಗೊಳ್ಳುವುದಕ್ಕೆ ಕೋರ್ಟಿನ ಅನುಮತಿ ಕೋರಬೇಕು ಎಂಬ ಶರತ್ತನ್ನು ವಿಧಿಸಲಾಗಿತ್ತು.

-ಉದಯವಾಣಿ

Comments are closed.