ಕರ್ನಾಟಕ

ವರುಣಾದಲ್ಲಿ ಪುತ್ರನಿಗಾಗಿ ಮತ ಯಾಚಿಸಿದ ಸಿಎಂ ಸಿದ್ಧರಾಮಯ್ಯ

Pinterest LinkedIn Tumblr


ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಡಾ.ಯತೀಂದ್ರ ಅವರ ಪರವಾಗಿ ಪ್ರಚಾರ ನಡೆಸಿದರು.

ಕ್ಷೇತ್ರದ ಕೊಣನೂರು, ಹನುಮನಪುರ, ಕಾರ್ಯ, ತಗಡೂರು ಗ್ರಾಮದಲ್ಲಿ ಮುಖ್ಯಮಂತ್ರಿಯವರು ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮತ ಯಾಚಿಸಿದರು.

ಪ್ರಚಾರದ ವೇಳೆ ಹನುಮನಪುರ ಗ್ರಾಮದ ಮುಖಂಡ ಬಸವರಾಜಪ್ಪ ಅವರ ಮನೆಗೆ ತೆರಳಿದ ಮುಖ್ಯಮಂತ್ರಿಯವರು, ಅನಾರೋಗ್ಯಕ್ಕೆ ಒಳಗಾಗಿರುವ ಬಸವರಾಜಪ್ಪ ಅವರ ಆರೋಗ್ಯ ವಿಚಾರಿಸಿದರು.

ನೆರೆದಿದ್ದ ಜನತೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಯವರು ‘ನಾನು ಈ ಕ್ಷೇತ್ರದ ಮಣ್ಣಿನ ಮಗ, ನನ್ನ ಮಗ ಯತೀಂದ್ರ. ಕಷ್ಟ ಸುಖಕ್ಕೆ ಆಗುವವರು ನಾವೇ ಹೊರತು ಹೊರಗಿನಿಂದ ಬಂದವರಲ್ಲ’ ಎಂದರು.

‘ಸಂವಿಧಾನ ಬದಲಿಸಲು ಹೊರಟವರು ಬಿಜೆಪಿಯವರು, ಆ ಪಕ್ಷ ಢೋಂಗಿ ಪಕ್ಷ, ನುಡಿದಂತೆ ನಡೆಯುವವರು ನಾವು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ನಾವು ಬಿಜೆಪಿಯವರಂತೆ ಬಾಯಿ ಮಾತಿನಲ್ಲಿ ಹೇಳುವವರಲ್ಲ, ಮಾಡಿ ತೋರಿಸುವವರು ಎಂದರು.

ಲೋಕೋಪಯೋಗಿ ಸಚಿವ ಡಾ. ಮಹಾದೇವಪ್ಪ ಅವರು ಪ್ರಚಾರದಲ್ಲಿ ಭಾಗಿಯಾಗಿದ್ದರು.

Comments are closed.