ರಾಷ್ಟ್ರೀಯ

ವ್ಯಾಪಾರಿಯ ಅಡ್ಡಗಟ್ಟಿ 50,000 ಲೂಟಿ ಮಾಡಿದ ಶಸ್ತ್ರಧಾರಿಗಳು

Pinterest LinkedIn Tumblr


ಮುಜಫ‌ರನಗರ : ಸಶಸ್ತ್ರ ದುಷ್ಕರ್ಮಿಗಳು ಶಾಮ್ಲಿ ಜಿಲ್ಲೆಯ ಬ್ಯಾಂಕ್‌ ಒಂದರ ಸಮೀಪ ವ್ಯಾಪಾರಿ ಒಬ್ಬರನ್ನು ಅಡ್ಡಗಟ್ಟಿ ಅವರಿಂದ 50,000 ರೂ. ಲೂಟಿ ಮಾಡಿದ ಘಟನೆ ನಡೆದಿದೆ.

ಕೈರಾನಾದಲ್ಲಿನ ಬ್ಯಾಂಕ್‌ ಶಾಖೆಯಲ್ಲಿ ಹಣ ವಿತ್‌ಡ್ರಾ ಮಾಡಿಕೊಂಡು ವ್ಯಾಪಾರಿ ಆರ್‌ ಪಿ ಮಿತ್ತಲ್‌ ಅವರು ಹೊರ ಬರುವುದನ್ನೇ ಕಾಯುತ್ತಿದ್ದ ಶಸ್ತ್ರಧಾರಿ ದುಷ್ಕರ್ಮಿಗಳು ಅವರನ್ನು ತಡೆಗಟ್ಟಿ 50,000 ರೂ. ಲೂಟಿ ಮಾಡಿದರು ಎಂದು ಎಸ್‌ಎಚ್‌ಓ ಸುನೀಲ್‌ ದತ್‌ ತಿಳಿಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಪೊಲೀಸರು ಕೇಸು ದಾಖಲಿಸಿಕೊಂಡು ಶಸ್ತ್ರಧಾರಿ ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

-ಉದಯವಾಣಿ

Comments are closed.