ರಾಷ್ಟ್ರೀಯ

ಸುಳ್ಳು ನಿಧನ ಸುದ್ದಿಗೆ ಶ್ರದ್ದಾಂಜಲಿ: ನಗೆಪಾಟಲಿಗೀಡಾದ ಕೇಂದ್ರ ಸಚಿವರು

Pinterest LinkedIn Tumblr


ದೆಹಲಿ: ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಅವರ ನಿಧನ ಸುಳ್ಳು ಸುದ್ದಿ ಎಂದು ಮಾಧ್ಯಮಗಳು ವರದಿ ಮಾಡಿದ್ದರೂ, ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಹಾಗು ಜಿತೇಂದ್ರ ಸಿಂಗ್ ಸೇಶನ್ ಶ್ರದ್ಧಾಂಜಲಿ ಸಲ್ಲಿಸಿ ನಗೆಪಾಟಲಿಗೀಡಾ ಗಿದ್ದಾರೆ.

ಎ.6ರಂದು ಟಿ.ಎನ್.ಶೇಷನ್ ನಿಧನರಾಗಿದ್ದಾರೆ. ಇದಕ್ಕೂ ಒಂದು ದಿನ ಮೊದಲು ಅವರ ಪತ್ನಿ ನಿಧನರಾಗಿದ್ದರು. ಅವರಿಗೆ ಮಕ್ಕಳಿಲ್ಲ ಎಂದು ಜಿತೇಂದ್ರ ಸಿಂಗ್ ಟ್ವೀಟ್ ಮಾಡಿ ದ್ದರು. ಇದೇ ಟ್ವೀಟ್ ಅನ್ನು ನಂಬಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ‘ಓಂ ಶಾಂತಿ’ ಎಂದು ಟ್ವೀಟ್ ಮಾಡಿದ್ದರು. ಇದನ್ನು ಈಗ ಡಿಲೀಟ್ ಮಾಡಲಾಗಿದೆ.

ಮಾ.31ರಂದು ಶೇಷನ್ ರ ಪತ್ನಿ ಜಯಲಕ್ಷ್ಮೀ ನಿಧನರಾಗಿದ್ದರು. ಮರುದಿನ ಶೇಷನ್ ನಿಧನರಾಗಿದ್ದಾರೆ ಎಂಬ ವದಂತಿ ಹಬ್ಬತೊಡ ಗಿತ್ತು. ಈ ಬಗ್ಗೆ ಶೇಷನ್ ಅವರ ಮನೆಗೆ ‘ಬೂಮ್ ಲೈವ್’ ಕರೆ ಮಾಡಿದ್ದು, ಶೇಷನ್ ನಿಧನದ ಸುದ್ದಿ ಸುಳ್ಳು ಎಂದು ಸಂಬಂಧಿಕ ರೊಬ್ಬರು ಖಚಿತಪಡಿಸಿದ್ದಾರೆ.

Comments are closed.