ಕರ್ನಾಟಕ

ಮಾಜಿ ಸಚಿವರ ವಿರುದ್ಧ ಮಾಜಿ ಪ್ರಿಯತಮೆಯರು !

Pinterest LinkedIn Tumblr

ರತ್ನಾ ಎಸ್.ಗೌಡ ಬೆಂಗಳೂರು

ಮಾಜಿ ಸಚಿವರೊಂದಿಗೆ ರಾಸಲೀಲೆಯಲ್ಲಿ ತೊಡಗಿ ಎಲ್ಲೆಡೆ ಸುದ್ದಿಯಾಗಿದ್ದ ಮಹಿಳಾ ಮಣಿ ಗಳು ಇದೀಗ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಬಿಜೆಪಿ ಮಾಜಿ ಸಚಿವರಾದ ಎಸ್.ಎ. ರಾಮದಾಸ್- ಪ್ರೇಮಕುಮಾರಿ, ರೇಣುಕಾಚಾರ್ಯ-ನರ್ಸ್ ಜಯಲಕ್ಷ್ಮೀ ಹಾಗೂ ಮಾಜಿ ಸಚಿವ ಎಚ್.ವೈ.ಮೇಟಿ-ವಿಜಯಲಕ್ಷ್ಮೀ ರಾಸಲೀಲೆ ಪ್ರಕರಣಗಳು ಬಹಿರಂಗವಾಗಿದ್ದವು. ಇದೀಗ ಮೂವರು ತಮ್ಮ ಮಾಜಿ ಪ್ರಿಯಕರರ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವುದು ಕುತೂಹಲ ಮೂಡಿಸಿದೆ. ಎಸ್.ಎ.ರಾಮ ದಾಸ್ ಅವರ ಪ್ರೇಮಪುರಾಣ ಸಾಕಷ್ಟು ಸದ್ದು ಮಾಡಿತ್ತು.

ಈಗ ಇವರ ವಿರುದ್ಧವೇ ಪ್ರೇಮಕುಮಾರಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವು ದಾಗಿ ಘೋಷಿಸಿದ್ದಾರೆ. ರಾಮದಾಸ್ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕ ಹಾಗೂ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅದೇ ರೀತಿ ರೇಣುಕಾಚಾರ್ಯ ಹಾಗೂ ನರ್ಸ್ ಜಯಲಕ್ಷ್ಮೀ ಅವರ ರಾಸ ಲೀಲೆ ಕೂಡ ಸಾಕಷ್ಟು ಗುಲ್ಲೆಬ್ಬಿಸಿತ್ತು. ಇಬ್ಬರೂ ಪರಸ್ಪರ ಮಾಧ್ಯಮ ಗಳ ಮುಂದೆ ಬಿಡುಗಡೆ ಮಾಡಿ ಮುಜುಗರಕ್ಕೆ ಒಳಗಾಗಿದ್ದರು. ಈ ಪ್ರಕರಣದಿಂದಲೇ ಜಯಲಕ್ಷ್ಮೀ ಸಾಕಷ್ಟು ಜನಪ್ರಿಯಗೊಂಡಿ ದ್ದರು. ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿಯೂ ಭಾಗ ವಹಿಸಿದ್ದರು.

ಅಲ್ಲದೆ, ಸಿನಿಮಾ, ಬೆಳ್ಳಿತೆರೆಯಲ್ಲಿ ಮಿಂಚಿದ್ದರು. ಈಗ ಮಹಿಳಾ ಪಕ್ಷವಾದ ‘ಎಂಇಪಿ’ಗೆ ಜಯಲಕ್ಷ್ಮೀ ಸೇರ್ಪಡೆಗೊಂಡಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವ ಜಯಲಕ್ಷ್ಮೀ ರೇಣುಕಾಚಾರ್ಯ ಪ್ರತಿನಿಧಿಸುವ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿಯೇ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಎಚ್.ವೈ.ಮೇಟಿ ರಾಸಲೀಲೆ ವಿಡಿಯೊ ಮಾಧ್ಯಮಗಳಲ್ಲಿ ನಂತರ ಈ ವಿಡಿಯೊದಲ್ಲಿ ಇರುವುದು ತಾವೇ ಎಂದು ಆಯುವೇರ್ದಿಕ್ ನರ್ಸ್ ವಿಜಯಲಕ್ಷ್ಮೀ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದರು. ಈಗ ವಿಜಯಲಕ್ಷ್ಮೀ ಪಕ್ಷೇತರ ಅಭ್ಯರ್ಥಿಯಾಗಿ ಮೇಟಿ ವಿರುದ್ಧ ಬಾಗಲಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕ ಷಡಕ್ಷರಿ ಅವರ ಎರಡನೇ ಪತ್ನಿ ಎಂದು ಹೇಳಿಕೊಳ್ಳುವ ಮಧು ಕೂಡ ತನ್ನ ಪತಿಯ ವಿರುದ್ಧವೇ ತಿಪಟೂರಿನಲ್ಲಿ ಸ್ಪರ್ಧಿಸಲಿದ್ದಾರೆ. ಆದರೆ, ಯಾವ ಪಕ್ಷದಿಂದ ಎಂಬುದು ಇನ್ನೂ ಅಂತಿಮವಾಗಿಲ್ಲ. 2014ರ ಫೆಬ್ರವರಿ ತಿಂಗಳಲ್ಲಿ ಮೈಸೂರಿನ ಪ್ರೇಮಕುಮಾರಿ ಮುಂದೆ ಪ್ರತ್ಯಕ್ಷಗೊಂಡು ಮಾಜಿ ಸಚಿವ ರಾಮ್‌ದಾಸ್ ನನ್ನೊಂದಿಗೆ 5 ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದು, ಇವರ ಅನಧಿಕೃತ ಪತ್ನಿಯಾಗಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಇದರಿಂದ ರಾಮದಾಸ್ ವಿಷ ಸೇವನೆ ಮಾಡಿ ಆಸ್ಪತ್ರೆಗೂ ದಾಖಲಾಗಿದ್ದರು. ನನ್ನೊಂದಿಗೆ ಸಂಬಂಧ ಬೆಳೆಸಿ ನಂತರ ಮದುವೆ ನಿರಾಕರಿಸಿದ ಫೋನ್ ಸಂಭಾಷಣೆ ಯನ್ನು ಬಿಡುಗಡೆ ಮಾಡಿ ರಾಮದಾಸ್ ಮಾನ ಹರಾಜು ಹಾಕಿದ್ದರು.

ರಾಮದಾಸ್‌ರ ರಾಮಾಯಣದಿಂದ ಬಿಜೆಪಿ ಕೂಡ ತಲೆ ತಗ್ಗಿಸುವಂತಾಯಿತು. ಈ ಕಾರಣಕ್ಕೆ ರಾಮದಾಸ್‌ಗೆ 2013ರ ವಿಧಾನಸಭಾ ಟಿಕೆಟ್ ಕೂಡ ಕೈ ತಪ್ಪಿತ್ತು. 2007ರಲ್ಲಿ ನರ್ಸ್ ಜಯಲಕ್ಷ್ಮಿ ಹಾಗೂ ಮಾಜಿ ಸಚಿವ ರೇಣುಕಾಚಾರ್ಯ ಅವರ ಪ್ರೇಮಪುರಾಣ ಬಹಲಾಗಿತ್ತು. ಇಬ್ಬರು ಪರಸ್ಪರ ಮುತ್ತು ಕೊಡುವ ಫೋಟೊ ಬಿಡುಗಡೆ ಮಾಡಿಕೊಂಡಿದ್ದು, ಸಾಕಷ್ಟು ಸುದ್ದಿಯಾಗಿತ್ತು. ಇತ್ತೀಚೆಗೆ ಹೆಚ್ಚು ಸುದ್ದಿಯಾಗಿದ್ದು ಎಚ್.ವೈ.ಮೇಟಿ ರಾಸಲೀಲೆ ವಿಡಿಯೊ ಪ್ರಕರಣ. ಸೆಕ್ಸ್ ಸ್ಕ್ಯಾಂಡಲ್ ಎಂದೇ ಬಿಂಬಿತಗೊಂಡ ಪರಿಣಾಮ ಮೇಟಿ ಸಚಿವ ಸ್ಥಾನವೂ ಕೈ ತಪ್ಪಿತು. ಬಳಿಕ ಈ ವಿಡಿಯೊದಲ್ಲಿ ಇರುವುದು ನಾನೇ ಎಂದು ವಿಜಯಲಕ್ಷ್ಮೀ ಮಾಧ್ಯಮ ಗಳ ಬಂದಿ ದ್ದರು. ಈಗ ಮೇಟಿ ವಿರುದ್ಧ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಸಚಿವ ಹಾಗೂ ಶಾಸಕ ಸ್ಥಾನ ಕಳೆದುಕೊಳ್ಳಲು ಕಾರಣವಾಗಿದ್ದ ಮಹಿಳೆಯರು ಇದೀಗ ಅವರ ವಿರುದ್ಧವೇ ರಾಜಕೀಯವಾಗಿ ಸಮರ ಸಾರಿರುವುದು ಈ ಚುನಾ ವಣೆಯ ಮತ್ತೊಂದು ಕುತೂಹಲವಾಗಿದೆ.

ಮಧು ಕಣಕ್ಕೆ?
ಷಡಕ್ಷರಿ ತಿಪಟೂರು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇವರು ಮಧು ಎಂಬುವವರೊಂದಿಗೆ ಸಂಬಂಧ ಹೊಂದಿದ್ದರು. ಆಕೆ ಕೆಲ ವರ್ಷಗಳ ನಂತರ ಷಡಕ್ಷರಿ ಅವರ ಎರಡನೇ ಪತ್ನಿ ಎಂದು ಮಾಧ್ಯಮಗಳ ಬಂದಿದ್ದರು. ನನಗೂ ನನ್ನ ಮಗನಿಗೂ ಅನ್ಯಾಯವೆಸಗಿರುವ ಷಡಕ್ಷರಿ ವಿರುದ್ಧ ತಿಪಟೂರಿನಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಯಾವ ಪಕ್ಷದಿಂದ ನಿಲ್ಲು ತ್ತಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ.

Comments are closed.