ರಾಷ್ಟ್ರೀಯ

ಸಹೋದರಿಯ ನಲ್ಲನನ್ನು 12 ಬಾರಿ ಇರಿದು ಕೊಂದ ಬಾಲಕ

Pinterest LinkedIn Tumblr


ಸೂರತ್: ಸಹೋದರಿಯ ಜತೆ ಸಂಬಂಧ ಹೊಂದಿದ್ದ ಯುವಕನನ್ನು 9ನೇ ತರಗತಿಯ ವಿದ್ಯಾರ್ಥಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ದಿಂಡೊಲಿಯಲ್ಲಿ ನಡೆದಿದೆ.

ಸಂತೋಶಿ ನಗರದ ನಿವಾಸಿ ಜೈನೀಶ್ ಅಲಿಯಾಸ್ ಜಿಗರ್ ರಾಣಾ (22) ಎಂಬಾತನನ್ನು 17 ವರ್ಷದ ಅಪ್ರಾಪ್ತ ಯುವಕ 12 ಬಾರಿ ಇರಿದು ಕೊಲೆಗೈದಿದ್ದಾನೆ.

‘ಮೃತ ರಾಣಾ ನಿವಾಸಕ್ಕೆ ತೆರಳಿದ್ದ ಬಾಲಕ, ತನ್ನ ಸಹೋದರಿಯನ್ನು ಭೇಟಿ ಮಾಡುವುದನ್ನು ನಿಲ್ಲಿಸು. ಇಲ್ಲದಿದ್ದರೆ, ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆ ಒಡ್ಡಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಬಾಲಕ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ರಾಣಾ, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಆರೋಪಿ ಬಾಲಕನ ಮನೆ ಮುಂದೆಯೇ ಮೃತ ರಾಣಾನ ಮನೆಯಿದ್ದು, ರಾಣಾ ಹಾಗೂ ಬಾಲಕನ ಸಹೋದರಿ ಪರಸ್ಪರ ಸಂಬಂಧವಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಮೃತ ರಾಣಾ ವಾಟರ್ ಬಾಟಲ್ ಡೆಲಿವರಿ ಬಾಯ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ. ಆರೋಪಿ ಬಾಲಕನ ವಯಸ್ಸು ಪರಿಶೀಲಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.