ಮನೋರಂಜನೆ

ಬರಲಿದೆ ಆರ್‌ಎಸ್‌ಎಸ್ ಕುರಿತ ಚಿತ್ರ!

Pinterest LinkedIn Tumblr


‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ತನ್ನದೇ ಆದ ಇತಿಹಾಸ ಹೊಂದಿದೆ. ಇದೀಗ ಆರ್‌ಎಸ್‌ಎಸ್ ಕುರಿತ ಚಿತ್ರ ತೆರೆಗೆ ತರಲು ತಯಾರಿಯೂ ನಡೆದಿದೆ. ಪ್ರಸಿದ್ಧ ನಿರ್ದೇಶಕ ರಾಜಮೌಳಿ ಅವರ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರದ ಸ್ಕ್ರಿಪ್ಟ್ ಬರೆಯುತ್ತಿದ್ದಾರಂತೆ. ವಿಜಯೇಂದ್ರ ಪ್ರಸಾದ್ ಈ ಹಿಂದೆ ‘ಬಾಹುಬಲಿ’, ‘ಭಜರಂಗಿ ಬಾಯ್ ಜಾನ್’, ‘ಮರ್ಸೆಲ್’ ಚಿತ್ರಗಳಿಗೆ ಸ್ಕ್ರಿಪ್ಟ್ ಬರೆದಿದ್ದರು.

ಸದ್ಯ ತಯಾರಾಗುತ್ತಿರುವ ‘ಆರ್‌ಎಸ್‌ಎಸ್’ ಚಿತ್ರ ಯಾವಾಗ ಸೆಟ್ಟೇರಬಹುದು ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಚಿತ್ರದಲ್ಲಿ ನಟಿಸಲು ನಟ ಅಕ್ಷಯ್ ಕುಮಾರ್ ಸೇರಿದಂತೆ ಮತ್ತಿತರ ಸ್ಟಾರ್ ನಟರಿಗೆ ಆಫರ್ ನೀಡಲು ಪ್ಲಾನ್ ಮಾಡಲಾಗಿದೆಯಂತೆ.

Comments are closed.