ರಾಷ್ಟ್ರೀಯ

ಅಮೃತ್‌ಸರ್ ತಲುಪಿದ 38 ಮಂದಿಯ ಮೃತದೇಹ

Pinterest LinkedIn Tumblr


ದೆಹಲಿ: 2014ರಲ್ಲಿ ಇರಾಖ್‌ನ ಮೊಸೂಲ್ ನಲ್ಲಿ ಉಗ್ರರ ಅಟ್ಟಹಾಸಕ್ಕೆೆ ಬಲಿಯಾದ 39 ಭಾರತೀಯರ ಪೈಕಿ 38 ಜನರ ಮೃತ ದೇಹ ಪಂಜಾಬ್‌ನ ಅಮೃತ್‌ಸರ್‌ಗೆ ಬಮದು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಮೃತ ಪಟ್ಟ ಒಟ್ಟು 39 ಮಂದಿಗಳಲ್ಲಿ 27 ಮಂದಿ ಪಂಜಾಬ್, 4 ಮಂದಿ ಹಿಮಾಚಲ ಪ್ರದೇಶ, 2 ಮಂದಿ ಪಶ್ಚಿಮ ಬಂಗಾಳ ಹಾಗೂ ಆರು ಮಂದಿ ಬಿಹಾರದವರು.

ಡಿಎನ್‌ಎ ಪರೀಕ್ಷೆೆಯಲ್ಲಿ ಒಂದು ಮೃತ ದೇಹ ಶೇ. 75 ರಷ್ಟು ಮಾತ್ರ ತಾಳೆಯಾಗುತ್ತಿದ್ದರಿಂದ ಆ ಮೃತ ದೇಹ ಭಾರತಕ್ಕೆೆ ತರಲಾಗಿಲ್ಲ. ಉಳಿದವುಗಳಿ ಶೇ.95 ರಷ್ಟು ತಾಳೆಯಾಗಿದ್ದವು.

ಭಾನುವಾರ ಈ ಮೃತ ದೇಹಗಳನ್ನು ಭಾರತಕ್ಕೆೆ ತರಲು ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಕೆ ಸಿಂಗ್ ಇರಾಖ್‌ಗೆ ತೆರಳಿದ್ದರು. ಈಗ ಮೃತ ದೇಹಗಳು ಅಮೃತ್‌ಸರ್‌ಗೆ ತಲುಪಿದ್ದು, ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾತರಿಸಲಾಗುತ್ತದೆ. ಬಳಿಕ ಮೃತ ಪಟ್ಟವರ ಕುಟುಂಬಗಳನ್ನು ಭೇಟಿ ಮಾಡಲು ಪಟನಾ ಹಾಗೂ ಕೋಲ್ಕತಾಗೆ ತೆರಳಲಿದ್ದಾರೆ.

ಮೃತರ ಕುಟುಂಬಗಳಿಗೆ ಪಂಜಾಬ್ ಸರಕಾರ ಐದು ಲಕ್ಷ ಪರಿಹಾರ ಘೋಷಿಸಿದೆ.

Comments are closed.