ರಾಷ್ಟ್ರೀಯ

ಸ್ಪೀಕರ್‌ಗೆ ಕ್ಷೀರಾಭಿಷೇಕ ಮಾಡಿದ ಗ್ರಾಮಸ್ಥರು!

Pinterest LinkedIn Tumblr


ಹೈದರಾಬಾದ್: ತೆಲಂಗಾಣದ ವಾರಂಗಲ್ ಪ್ರದೇಶದ ಭೋಲ್ಪಾಲ್‌ನಲ್ಲಿ ಗ್ರಾಮ ಪಂಚಾಯತ್ ಕಟ್ಟಡದ ಉದ್ಘಾಟನೆ ನೆರವೇರಿಸಿದ ವಿಧಾನ ಸಭಾ ಸ್ಪೀಕರ್ ಎಸ್ ಮಧುಸೂದನ ಚೆರಿ ಅವರಿಗೆ ಗ್ರಾಮಸ್ಥರು ಮತ್ತು ಟಿಆರ್‌ಎಸ್ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿದ್ದಾರೆ.

ಇತ್ತಿಚೆಗೆ ರಾಜ್ಯ ಸರಕಾರದಿಂದ ಬಂದ ಆದೇಶದ ಪ್ರಕಾರ ರಾಜ್ಯದ 4000 ಗ್ರಾಮಗಳು ಮತ್ತು 15000 ಬುಡಕಟ್ಟು ಗ್ರಾಮಗಳನ್ನು ಗ್ರಾಮ ಪಂಚಾಯತ್ ಆಗಿ ಪರಿವರ್ತಿಸುವ ಕಾರ್ಯ ನಡೆದಿದ್ದು, ಭೋಲ್ಪಾಲ್‌ನಲ್ಲಿ ನಡೆದ ಪಂಚಾಯತ್ ಉದ್ಘಾಟನಾ ಸಮಾರಂಭದಲ್ಲಿ ಜನರು ಹಾಲಿನ ಅಭಿಷೇಕವನ್ನು ನಡೆಸಿದ್ದಾರೆ.

ಆದರೆ ಕಾಂಗ್ರೆಸ್ ವಕ್ತಾರರು ಇದನ್ನು ವಿರೋಧಿಸಿದ್ದು, ಇದು ಸಂಪನ್ಮೂಲಗಳ ದುರ್ಬಳಕೆ ಎಂದು ಆರೋಪಿಸಿದ್ದಾರೆ. ರಾಜಕಾರಣಿಗಳನ್ನು ಈ ರೀತಿ ಪೂಜಿಸುವುದು ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಹಾನಿಕಾರಕ ಎಂದು ದೂರಿದ್ದಾರೆ.

Comments are closed.