ರಾಷ್ಟ್ರೀಯ

ವಿಶ್ವಕಪ್‌ ಗೆದ್ದ ಏಳನೇ ವಾರ್ಷಿಕೋತ್ಸವದ ದಿನ ಪದ್ಮಭೂಷಣ ಪ್ರಶಸ್ತಿ ಪಡೆದ ಧೋನಿ

Pinterest LinkedIn Tumblr


ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಹಾಗೂ ವಿಶ್ವ ಸ್ನೂಕರ್‌ ಚಾಂಪಿಯನ್‌ ಪಂಕಜ್‌ ಆಡ್ವಾಣಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಸಲಾಯಿತು.

ಸೋಮವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಉಭಯರಿಗೂ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಮಹೇಂದ್ರ ಸಿಂಗ್‌ ಧೋನಿಗೆ ಇದು ವಿಶೇಷ ದಿನ. ಏಳು ವರ್ಷಗಳ ಹಿಂದೆ ಇದೇ ದಿನ ಅಂದರೆ ಏಪ್ರಿಲ್‌ 2, 2011ರಂದು ಧೋನಿ ಭಾರತಕ್ಕೆ ವಿಶ್ವಕಪ್‌ ಕ್ರಿಕೆಟ್‌ ಟ್ರೋಫಿ ದೊರಕಿಸಿಕೊಟ್ಟಿದ್ದರು.

Cricketer Mahendra Singh Dhoni receives Padma Bhushan at Rashtrapati Bhawan in Delhi https://t.co/C9fTvXPt9w
— ANI (@ANI) 1522674442000

ಏಳು ವರ್ಷಗಳ ನಂತರ ಇದೇ ದಿನ ಧೋನಿ ಲೆಫ್ಟಿನೆಂಟ್‌ ಕರ್ನಲ್‌ ಸಮವಸ್ತ್ರ ಧರಿಸಿ ಬಂದು ಪ್ರಶಸ್ತಿ ಸ್ವೀಕರಿಸಿದರು.

ವಿಶ್ವಕಪ್‌ ಗೆದ್ದ ನಂತರ ನವೆಂಬರ್‌ 1, 2011ರಂದು ಧೋನಿಗೆ ಸೇನೆಯಿಂದ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಗೌರವ ನೀಡಿತ್ತು.

ಪಂಕಜ್‌ ಆಡ್ವಾಣಿ ಕೂಡ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು.

Comments are closed.