ರಾಷ್ಟ್ರೀಯ

ಎಂಗೇಜ್‌ಮೆಂಟ್‌ ಪಾರ್ಟಿಯಲ್ಲಿ ಚಿಕನ್‌ಗಾಗಿ ಜಗಳ: ಒಬ್ಬನ ಸಾವು

Pinterest LinkedIn Tumblr


ಹೈದರಾಬಾದ್‌: ಮದುವೆ ನಿಶ್ಚಿತಾರ್ಥದ ತಡರಾತ್ರಿಯ ಪಾರ್ಟಿಯೊಂದರಲ್ಲಿ ಚಿಕನ್‌ ಕರಿಯನ್ನು ಬೇಗನೆ ಬಡಿಸದಿದ್ದ ಕಾರಣಕ್ಕೆ ಸಿಟ್ಟಿಗೆದ್ದ ಒಂದು ಗುಂಪು ಇನ್ನೊಂದು ಗುಂಪಿನೊಂದಿಗೆ ನಡೆಸಿದ ಜಗಳದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

ಚಾರ್ಮಿನಾರ್‌ ಸಮೀಪದ ಹುಸೈನೀ ಆಲಂ ಪ್ರದೇಶದಲ್ಲಿನ ಮದುವೆ ಕಾರ್ಯಕ್ರಮದ ಹಾಲ್‌ನಲ್ಲಿ ನಡೆದಿದ್ದ ಎಂಗೇಜ್‌ಮೆಂಟ್‌ ಪಾರ್ಟಿಯಲ್ಲಿ ಚಿಕನ್‌ ಕರಿ ತಡವಾಗಿ ಬಡಿಸಿದ ಕಾರಣಕ್ಕೆ ಸಿಟ್ಟಿಗೆದ್ದ ಒಂದು ಗುಂಪು ಇನ್ನೊಂದು ಗುಂಪಿನೊಡನೆ ನಸುಕಿನ 1.30ರ ಹೊತ್ತಿಗೆ ಜಗಳ ನಡೆಸಿತು. ಘರ್ಷಣೆಯಲ್ಲಿ ಒಬ್ಬ ಹುಡುಗ ಮೃತಪಟ್ಟು ಇನ್ನೊಬ್ಬ ಹುಡುಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ಪೊಲೀಸರು ಘಟನೆಗೆ ಸಂಬಂಧಿಸಿ ಮೂವರನ್ನು ವಶಕ್ಕೆ ತೆಗೆದುಕೊಂಡ ಇನ್ನಷ್ಟು ಮಂದಿ ಆರೋಪಿಗಳ ಹುಡುಕಾಟದಲ್ಲಿರುವುದಾಗಿ ತಿಳಿದು ಬಂದಿದೆ.

-ಉದಯವಾಣಿ

Comments are closed.