ರಾಷ್ಟ್ರೀಯ

ಮಗುವನ್ನು ಹೊತ್ತೊಯ್ದ ಮಂಗಗಳು ! ಬಾವಿಯೊಂದರಲ್ಲಿ ಶವವಾಗಿ ಪತ್ತೆ

Pinterest LinkedIn Tumblr

ಭುವನೇಶ್ವರ್: ಇಲ್ಲಿನ ತಲಬಸ್ತಾ ಗ್ರಾಮದಲ್ಲಿ ಮಂಗಗಳು 17 ದಿನದ ಮಗುವೊಂದನ್ನು ಹೊತ್ತೊಯ್ದಿದ್ದವು. ಆ ಮಗುವಿನ ಶವ ಭಾನುವಾರ ಬಾವಿಯೊಂದರಲ್ಲಿ ಪತ್ತೆಯಾಗಿದೆ.

ರಾಮಕೃಷ್ಣ ನಾಯಕ್ ಅವರ 17 ದಿನದ ಗಂಡು ಮಗುವನ್ನು ಶನಿವಾರ ಬೆಳಗ್ಗೆ ಮನೆಯಲ್ಲಿ ಮಲಗಿಸಿದ್ದಾಗ ಮಂಗಗಳು ಮಗುವನ್ನು ಹೊತ್ತೊಯ್ದಿದ್ದವು. ಮಂಗಗಳು ಮಗುವನ್ನು ಹೊತ್ತೊಯ್ಯುತ್ತಿರುವುದನ್ನು ಮಗುವಿನ ಅಮ್ಮ ನೋಡಿದ್ದರೂ ಏನೂ ಮಾಡಲಾಗಲಿಲ್ಲ.

ಮಗುವಿಗಾಗಿ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ಭಾನುವಾರ ಹುಡುಕಾಟ ಮುಂದುವರಿಸಿದಾಗ ನಾಯಕ್ ಅವರ ಮನೆಯ ಬಳಿ ಇರುವ ಬಾವಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.

ಮಂಗಗಳು ಮಗುವನ್ನು ಬಾವಿಗೆಸೆದಿವೆ ಎಂದು ಬಾಂಕಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಿಸ್ವರಂಜನ್ ಸಹೋ ಹೇಳಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

Comments are closed.