ಕರ್ನಾಟಕ

ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಾಂಗ್ಲಾದಿಂದ ನಕಲಿ ನೋಟು ಸಾಗಿಸುತ್ತಿದ್ದ ಕಳ್ಳರ ಬಂಧನ

Pinterest LinkedIn Tumblr

ವಿಶಾಖಪಟ್ಟಣಂ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ರೈಲಿನಲ್ಲಿ ಸಾಗಾಟ ಮಾಡುತ್ತಿದ್ದ 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ನಕಲಿ ನೋಟುಗಳನ್ನು ಆಂಧ್ರಪ್ರದೇಶದ ವಿಶಾಕಪಟ್ಟಣಂನಲ್ಲಿ ಜಪ್ತಿ ಮಾಡಲಾಗಿದೆ.

ಹೈದರಾಬಾದ್-ಹೌರಾ ಈಸ್ಟ್ ಕೋಸ್ಟ್ ಎಕ್ಸ್ ಪ್ರೆಸ್ ನಲ್ಲಿ ನಕಲಿ ನೋಟುಗಳ ಸಾಗಣೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯ ವಿಶಾಖಪಟ್ಟಂ ವಿಭಾಗೀಯ ಅಧಿಕಾರಿಗಳು ದಾಳಿ ಮಾಡಿ 10.2 ಲಕ್ಷ ರುಪಾಯಿ ಮೌಲ್ಯದ ನೋಟುಗಳು ವಶಕ್ಕೆ ಪಡೆದಿದ್ದದಾರೆ. ಈ ಸಂಬಂಧ ಬೆಂಗಳೂರು ಮೂಲದ ಓರ್ವ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಐದು ಬಂಡಲ್ ಗಳಲ್ಲಿ 2000 ಮುಖ ಬೆಲೆಯ 510 ನಕಲಿ ನೋಟುಗಳನ್ನು ಸಾಗಿಸುತ್ತಿದ್ದರು. ವ್ಯಕ್ತಿಯೊಬ್ಬ ಬಾಂಗ್ಲಾದೇಶದಿಂದ ತಂದು ಪಶ್ಚಿಮ ಬಂಗಾಳದ ಮಲ್ಡಾದಲ್ಲಿ ಈ ನಕಲಿ ನೋಟುಗಳನ್ನು ಹಸ್ತಾಂತರಿಸಿದ್ದ. ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ನಕಲಿ ನೋಟುಗಳನ್ನು ಬದಲಾವಣೆ ಮಾಡುವ ಉದ್ದೇಶವಿತ್ತು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಬೆಂಗಳೂರು ಮೂಲದವರಾಗಿದ್ದು ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಹೊಂದಿದ್ದು ಈ ಹಿಂದೆ ಕಿಡ್ನಾಪ್ ಪ್ರಕರಣದಲ್ಲಿ ಬಂಧಿತನಾಗಿದ್ದ ಸದ್ಯ ಆರೋಪಿ ಬೇಲ್ ಮೇಲೆ ಜೈಲಿನಿಂದ ಹೊರಗಡೆ ಬಂದಿದ್ದ ಎಂದು ತಿಳಿದುಬಂದಿದೆ.

Comments are closed.