ರಾಷ್ಟ್ರೀಯ

ವಜ್ರೋದ್ಯಮಿ ರಸ್ಸೆಲ್ ಮೆಹ್ತಾರ ಪುತ್ರಿ ಶ್ಲೋಕ ಮೆಹ್ತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮುಕೇಶ್ ಪುತ್ರ ಆಕಾಶ್ ಅಂಬಾನಿ

Pinterest LinkedIn Tumblr

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಉದ್ಯಮಿ ಮುಕೇಶ್ ಅಂಬಾನಿಯವರ ಹಿರಿಯ ಪುತ್ರ ಆಕಾಶ್ ಅಂಬಾನಿ ವಜ್ರೋದ್ಯಮಿ ರಸ್ಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕ ಮೆಹ್ತಾ ಜೊತೆ ಮದುವೆಯಾಗಲಿದ್ದಾರೆ. ಕುಟುಂಬ ಸಮ್ಮುಖದಲ್ಲಿ ನಿನ್ನೆ ಗೋವಾದಲ್ಲಿ ಸಾಯಂಕಾಲ ನಡೆದ ಸಮಾರಂಭದಲ್ಲಿ ಉಂಗುರ ತೊಡಿಸಿ ಆಕಾಶ್ ಶ್ಲೋಕಾ ಮೆಹ್ತಾಗೆ ತಮ್ಮ ಪ್ರೇಮ ನಿವೇದನ ಮಾಡಿಕೊಂಡಿದ್ದಾರೆ.

ಈ ಜೋಡಿ ನಿಶ್ಚಿತಾರ್ಥಕ್ಕೆ ಮುನ್ನ ಫೋಟೋಶೂಟ್ ಮಾಡಿಕೊಂಡರು. ಆದರೆ ಮದುವೆ ಯಾವಾಗ ನಡೆಯಲಿದೆ ಎಂದು ಎರಡೂ ಕುಟುಂಬಗಳು ವಿವರ ನೀಡಿಲ್ಲ. ಈ ವರ್ಷಾಂತ್ಯಕ್ಕೆ ಮದುವೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಭಾರತದ ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿಯವರ ಹಿರಿಯ ಪುತ್ರ ಆಕಾಶ್ ಅಂಬಾನಿಯಾಗಿದ್ದು ರೋಸಿ ಬ್ಲೂ ಡೈಮಂಡ್ಸ್ ನ ಮುಖ್ಯಸ್ಥ ರುಸ್ಸೆಲ್ಲ್ ಮೆಹ್ತಾ ಅವರ ಪುತ್ರಿ ಶ್ಲೋಕ ಮೆಹ್ತಾ.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಮೂವರು ಮಕ್ಕಳಲ್ಲಿ ಆಕಾಶ್ ಮತ್ತು ಇಶಾ ಅವಳಿ ಸೋದರ-ಸೋದರಿಯರು. ಆಕಾಶ್ ತಮ್ಮ ತಂದೆಯ ರಿಲಯನ್ಸ್ ಜಿಯೊದ ಮಂಡಳಿಯಲ್ಲಿದ್ದಾರೆ.

ಅಂಬಾನಿ ಮತ್ತು ಮೆಹ್ತಾ ಕುಟುಂಬ ಹಿಂದಿನಿಂದಲೂ ಪರಿಚಿತರು. ಹಾಗೆಯೇ ಆಕಾಶ್ ಮತ್ತು ಶ್ಲೋಕ ಧೀರೂಬಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಒಟ್ಟಿಗೇ ಓದಿದವರು. ರುಸ್ಸೆಲ್ಲ್ ಮತ್ತು ಮೋನ ಮೆಹ್ತಾ ಅವರ ಮೂವರು ಮಕ್ಕಳಲ್ಲಿ ಶ್ಲೋಕ ಕಿರಿಯವಳು.

2009ರಲ್ಲಿ ಧೀರುಬಾಯಿ ಅಂಬಾನಿ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ಶ್ಲೋಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ರಾಜಕೀಯ ವಿಜ್ಞಾನ ಕೇಂದ್ರದಲ್ಲಿ ಕಾನೂನು ಮತ್ತು ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ಅಧ್ಯಯನ ಮಾಡಿದ್ದಾರೆ. 2014 ಜುಲೈಯಿಂದ ರೋಸಿ ಬ್ಲು ಫೌಂಡೇಶನ್ ನ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಕನೆಕ್ಟ್ ಫಾರ್ ಎಂಬ ಸರ್ಕಾರೇತರ ಸಂಘಟನೆಯ ಸಹ ಸ್ಥಾಪಕಿ ಕೂಡ.

ಇನ್ನು ಈ ವಿಷಯವನ್ನು ಸ್ವತಃ ತಾಯಿ ನೀತಾ ಅಂಬಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಯಂಕಾಲದ ಸುಂದರ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ.

Comments are closed.