ಕ್ರೀಡೆ

ಆಸ್ಟ್ರೇಲಿಯಾ ಮೋಸದಾಟ ಬಯಲು; ಆಸ್ಟ್ರೇಲಿಯಾ ನಾಯಕ ಸ್ಥಾನದಿಂದ ಸ್ಮೀತ್ ವಜಾ

Pinterest LinkedIn Tumblr

ಆಸ್ಟ್ರೇಲಿಯಾ : ಚೆಂಡು ವಿರೂಪಗೊಳಿಸಿದ್ದ ವಿವಾದದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರಾದ ಸ್ಟೀವನ್ ಸ್ಮೀತ್ ಹಾಗೂ ಡೇವಿಡ್ ವಾರ್ನರ್ ಅವರನ್ನು ಕ್ರಮವಾಗಿ ನಾಯಕ, ಉಪನಾಯಕ ಸ್ಥಾನದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಜಾಗೊಳಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಟೆಸ್ಟ್ ಪಂದ್ಯಕ್ಕೆ ಟಿಮ್ ಪೈನ್ ನಾಯಕರಾಗಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಉಳಿದಿರುವ ಟೆಸ್ಟ್ ಪಂದ್ಯ ಸಂಬಂಧ ಸ್ಟೀವ್ ಸ್ಮೀತ್ ಹಾಗೂ ಡೇವಿಡ್ ವಾರ್ನರ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರು ತಮ್ಮ ಸ್ಥಾನಗಳಿಂದ ದೂರವಿರಲು ಒಪ್ಪಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸಿಇಓ ಜೇಮ್ಸ್ ಸುದರ್ ಲ್ಯಾಂಡ್ ತಿಳಿಸಿದ್ದಾರೆ.

ಉಳಿಕೆ ಪಂದ್ಯಗಳು ನಡೆಯಬೇಕಿರುವುದರಿಂದ ಈ ಪ್ರಕರಣದ ತನಿಖೆಯನ್ನು ಶೀಘ್ರದಲ್ಲಿಯೇ ನಡೆಸಬೇಕೆಂಬುದು ಬೇಡಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ದೇಶ ಪ್ರತಿನಿಧಿಸುವ ಆಟಗಾರರಿಂದ ಗುಣಮಟ್ಟದ ವರ್ತನೆಯನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ, ಅಭಿಮಾನಿಗಳು ನಿರೀಕ್ಷಿಸುತ್ತಾರೆ . ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಂತಹ ವರ್ತನೆ ಕಂಡುಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.