ರಾಷ್ಟ್ರೀಯ

10ನೇ ತರಗತಿ ವಿದ್ಯಾರ್ಥಿನಿ ಮೇಲೆ ಪ್ರಾಂಶುಪಾಲನಿಂದ ಅತ್ಯಾಚಾರ

Pinterest LinkedIn Tumblr


ಹರಿಯಾಣ: ಪರೀಕ್ಷೆಯಲ್ಲಿ ಪಾಸು ಮಾಡಲು ಸಹಾಯ ಮಾಡುವುದಾಗಿ ಹೇಳಿ 10ನೇ ತರಗತಿ ವಿದ್ಯಾರ್ಥಿನಿಯೋರ್ವಳನ್ನು ಶಾಲೆಯ ಮುಖ್ಯಶಿಕ್ಷಕನೇ ಅತ್ಯಾಚಾರ ಮಾಡಿದ್ದಾನೆ.

ಹರಿಯಾಣದ ಸೋನಿಪತ್​ ಶಾಲೆಯ ವಿದ್ಯಾರ್ಥಿನಿಗೆ ದೈಹಿಕ ಶಿಕ್ಷಣಕ್ಕೆ ಸಂಬಂಧಪಟ್ಟ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುವುದಾಗಿ ನಂಬಿಸಿದ ಆ ಶಾಲೆಯ ಪ್ರಾಂಶುಪಾಲ ಸಂಬಂಧಿಕರ ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದು ಆತನ ಮೇಲೆ ಪೊಕ್ಸೊ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ.

ಆಗಿದ್ದೇನು?

ವಿದ್ಯಾರ್ಥಿನಿಯ ತಂದೆ ತನ್ನ ಮಗಳನ್ನು ಹೇಗಾದರೂ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಬೇಕು ಎಂದು ಪ್ರಾಂಶುಪಾಲರ ಬಳಿ ಕೇಳಿಕೊಂಡಿದ್ದ. ಅಲ್ಲದೆ, ಈ ಕಾರಣಕ್ಕೆ 10,000 ರೂಪಾಯಿ ನೀಡುವುದಾಗಿಯೂ ತಿಳಿಸಿದ್ದ. ಇದಕ್ಕೆ ಒಪ್ಪಿಕೊಂಡಿದ್ದ ಪ್ರಾಂಶುಪಾಲರು, ಮಗಳನ್ನು ಗೋಹಾನಾ ಬಳಿಯಿರುವ ತನ್ನ ಸಂಬಂಧಿ ಮನೆಗೆ ಬಿಡುವಂತೆ ಸೂಚಿಸಿದ್ದ. ಹಾಗೇ ನಡೆದುಕೊಂಡ ವಿದ್ಯಾರ್ಥಿನಿಯ ತಂದೆ ಪರೀಕ್ಷೆ ಮುಗಿಯುವ ವೇಳೆಗೆ ಬಂದು ನೋಡಿದರೆ ಆಕೆಯ ಮೇಲೆ ಅತ್ಯಾಚಾರವಾಗಿದ್ದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಘಟನೆಯಲ್ಲಿ ಮತ್ತಿಬ್ಬರು ಮಹಿಳೆಯರ ಕೈವಾಡವೂ ಇದ್ದು ಮೂವರೂ ಪರಾರಿಯಾಗಿದ್ದು ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹರಿಯಾಣದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು 2016ನೇ ಇಸ್ವಿಯಲ್ಲೇ 1187 ರೇಪ್​ಗಳು ನಡೆದಿವೆ. ದಿನಕ್ಕೆ ಮೂರು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ನ್ಯಾಷನಲ್​ ಕ್ರೈಮ್​ ರಿಕಾರ್ಡ್​ಬ್ಯೂರೋ (ಎನ್​ಸಿಆರ್​ಬಿ) ವರದಿ ಮಾಡಿದೆ.

Comments are closed.