ಕರಾವಳಿ

`ಹುಡುಗಿರೇ ಹುಷಾರ್’: ಉಡುಪಿಯಲ್ಲೊಬ್ಬ ಪೋಲಿ ಹೋಂ ಗಾರ್ಡ್; 11 ಯುವತಿಯರೊಂದಿಗಿನ ಲವ್ವಿಡವ್ವಿ ಫೋಟೋ ವೈರಲ್!

Pinterest LinkedIn Tumblr

ಉಡುಪಿ: ಉಡುಪಿ ಮೂಲದ ಹೋಂ ಗಾರ್ಡ್ ಒಬ್ಬ 11 ಯುವತಿಯರ ಜೊತೆ ತೆಗೆದುಕೊಂಡಿರುವ ಸೆಲ್ಫೀ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಡು, ಕೋಣೆ, ಪಾರ್ಕ್, ಕಾರಿನಲ್ಲಿ ಹುಡುಗಿಯರೊಂದಿಗೆ ತೆಗೆದುಕೊಂಡ ಫೋಟೋಗಳು ಈಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸ್ ಇಲಾಖೆಯಲ್ಲಿದ್ದು, ಈ ರೀತಿಯ ಫೋಟೋ ತೆಗೆದುಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈತ ಉಡುಪಿಯ ಶಿರ್ವ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಅದಕ್ಕೆ ಪೂರಕವಾಗಿ ಠಾಣೆಯೊಳಗೆ ಇತರ ಪೊಲೀಸರ ಜೊತೆಗೂ ಈತ ಸೆಲ್ಫೀ ತೆಗೆಸಿಕೊಂಡಿದ್ದಾನೆ. ಈ ಬಗ್ಗೆ ವಿಚಾರಣೆ ನಡೆಸಿರುವ ಸ್ಥಳೀಯ ಪೊಲೀಸರು, ಈತ ಕಾರ್ಕಳ ತಾಲೂಕಿನ ಸುಜೀತ್ ಶೆಟ್ಟಿ ಎಂದು ಗುರುತಿಸಿದ್ದಾರೆ. ಈತನ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿಯೂ ಎಸ್.ಪಿ ಲಕ್ಷ್ಮಣ ನಿಂಬರ್ಗಿ ಮಾಹಿತಿ ನೀಡಿದ್ದಾರೆ.

ಯುವತಿಯರೇ ಎಚ್ಚರ…
ಬೇರೆ ಬೇರೆ ಸ್ಥಳಗಳಲ್ಲಿ ಈತ ಬೇರೆಬೇರೆ ಯುವತಿಯರೊಂದಿಗೆ ತೆಗೆದುಕೊಂಡಿರುವ ಸೆಲ್ಫಿಯನ್ನು ಯಾರೋ ವೈರಲ್ ಮಾಡಿದ್ದಾರೆ. ಈ ಪೋಟೋಗಳು ಹೇಗೆ ವೈರಲ್ ಆಯ್ತು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೇಲ್ನೋಟಕೆ ಪ್ರೀತಿಯ ನಾಟಕವಾಡಿ ಈ ಯುವತಿಯರೊಂದಿಗೆ ಫೋಟೋ ತೆಗೆಸಿಕೊಂಡಿರುವುದು ಕಂಡುಬರುತ್ತಿದೆ. ಈವರೆಗೆ ಯಾವ ಯುವತಿಯರಿಂದಲೂ ಈತನ ವಿರುದ್ಧ ದೂರು ಬಂದಿಲ್ಲ. ಅವರೆಲ್ಲರೂ ಯಾರು ಎಂಬುದರ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ. ಪೊಲೀಸ್ ಎಂಬ ಹೆಸರಿನಲ್ಲಿ ಯುವತಿಯರನ್ನು ವಂಚಿಸಿದ್ದಾನೆಯೇ ಎಂಬುದು ಕೂಡ ತಿಳಿದುಬರಬೇಕಿದೆ.

Comments are closed.