ಕರಾವಳಿ

‘ಕಾಂಟ್ರಾಕ್ಟರ್ ಕೈಯಲ್ಲಿ ಕಾಂಗ್ರೆಸ್ ಟಿಕೆಟ್’: ಟ್ವೀಟ್ ಮಾಡಿದ್ದು ನಾನಲ್ಲ- ವೀರಪ್ಪ ಮೋಯ್ಲಿ

Pinterest LinkedIn Tumblr

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್‍ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಇದೀಗ ಕಾಂಗ್ರೆಸ್ ಪಕ್ಷದ ಹಣದ ಪ್ರಭಾವ ಬಿಚ್ಚಿಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರೋ ವೀರಪ್ಪ ಮೊಯ್ಲಿ, `ಕಾಂಟ್ರಾಕ್ಟರ್‍ಗಳ ಕೈಲಿ ಕಾಂಗ್ರೆಸ್ ಟಿಕೆಟ್’ ಎಂದಿದ್ದಾರೆ. ಕಾಂಗ್ರೆಸ್‍ನಲ್ಲಿ ಹಣದ ಹೊಂದಾಣಿಕೆಯಿಂದ ಅಭ್ಯರ್ಥಿಗಳನ್ನು ನಿರ್ಧರಿಸುವಂತಾಗಿದೆ ಅಂತ ಪಕ್ಷದ ವಿರುದ್ಧ ನೇರವಾಗಿ ಅವರು ಆರೋಪ ಮಾಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಹಾಗೂ ಅದರ ಹಿಂದಿನ ಹಣದ ಪ್ರಭಾವದ ಕುರಿತು ಅಸಮಾಧಾನ ಭುಗಿಲೆದ್ದಿದ್ದು, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಮುಖ್ಯಸ್ಥರೂ ಆಗಿರುವ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಅವರು ಲೋಕೋಪ ಯೋಗಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದರು.

ಗುರುವಾರ ರಾತ್ರಿ ಟ್ವೀಟ್ ಮೊಯ್ಲಿ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ‘ರಾಜಕೀಯದಲ್ಲಿನ ಹಣದ ಸಮಸ್ಯೆಯನ್ನು ಕಾಂಗ್ರೆಸ್ ಬಗೆಹರಿಸಿ ಕೊಳ್ಳಬೇಕಿದೆ. ರಸ್ತೆ ಗುತ್ತಿಗೆದಾರರು ಹಾಗೂ ರಾಜ್ಯ ಲೋಕೋಪಯೋಗಿ ಸಚಿವರ ಜೊತೆ ಅವರು ಹೊಂದಿರುವ ನಂಟು ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸುವುದು ದುಬಾರಿಯಾದೀತು’ ಎಂದು ಹೇಳಲಾಗಿತ್ತು. ಇದೇ ರೀತಿಯ ಟ್ವೀಟ್ ಒಂದನ್ನು ಮೊಯ್ಲಿ ಅವರ ಪುತ್ರ, ಉದ್ಯಮಿ ಹರ್ಷ ಮೊಯ್ಲಿ ಖಾತೆಯಿಂದಲೂ ಮಾಡಿದ್ದಾರೆ.

‘ಟ್ವೀಟ್ ಮಾಡಿದ್ದು ನಾನಲ್ಲ- ಮೊಯ್ಲಿ ಸ್ಪಷ್ಟನೆ..
ಟ್ವೀಟ್ ಮಾಡಿದ್ದು, ನಾನಲ್ಲ ಅದನ್ನು ಯಾರು ಮಾಡಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸಬೇಕು, ಇದು ಅನಧೀಕ್ರತ ಟ್ವೀಟ್ ಎಂದು ಹೇಳಿಕೆ ನೀಡಿದ್ದಾರೆ. ಪಕ್ಷದ ಆಂತರಿಕ ವಿಚಾರವನ್ನು ನಾನೆಂದು ಬಹಿರಂಗಪಡಿಸಿಲ್ಲ, ಪಡಿಸೋದು ಇಲ್ಲ ಎಂದಿದ್ದಾರೆ.

Comments are closed.