ರಾಷ್ಟ್ರೀಯ

ಆರ್‌ಎಸ್‌ಎಸ್‌ ಕಾರ್ಯವೈಖರಿಯನ್ನು ಹೊಗಳಿದ ಎಡಪಕ್ಷದ ಪ್ರಕಾಶ್‌ ಕಾರಟ್‌

Pinterest LinkedIn Tumblr


ಹೊಸದಿಲ್ಲಿ: ತ್ರಿಪುರಾದಲ್ಲಿ ಈ ಬಾರಿ ಕಮಲ ಅರಳಲು ಹಲವಾರು ಕಾರಣಗಳಿವೆ. ಚುನಾವಣೆ ಮುಗಿದ ನಂತರ ಈಗ ನಾಯಕರು ಇಡೀ ಬೆಳವಣಿಗೆಯನ್ನು ವಿಶ್ಲೇಷಣೆ ಮಾಡಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಿರುವುದು ಆರ್‌ಎಸ್‌ಎಸ್‌ನ ಬೇರು ಮಟ್ಟದ ಕಾರ್ಯಾಚರಣೆ.

ಆರ್‌ಎಸ್‌ಎಸ್‌ ಗುಡ್ಡಗಾಡು ಪ್ರದೇಶದಲ್ಲಿ ಬೇರು ಮಟ್ಟದ ಕಾರ್ಯಾಚರಣೆ ನಡೆಸಿತು. ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಆರಂಭಿಸುವ ಮೂಲಕ ಜನರ ಮನದಲ್ಲಿ ಸ್ಥಾನ ಗಿಟ್ಟಿಸಿತು. ಹೀಗಾಗಿ ಈಶಾನ್ಯ ರಾಜ್ಯದಲಲ್ಲಿ ಕಮಲ ಅರಳಲು ಸಾಧ್ಯವಾಯಿತು.

ಈ ರೀತಿಯ ವಿಶ್ಲೇಷಣೆ ಮಾಡಿರುವುದು ಬಿಜೆಪಿ ಅಥವಾ ಆರ್‌ಎಸ್‌ಎಸ್‌ ನಾಯಕರು ಅಲ್ಲ. ಬದಲಿಗೆ ಎಡಪಕ್ಷದ ಪ್ರಮುಖ ನಾಯಕ ಪ್ರಕಾಶ್‌ ಕಾರಟ್.

ಇಡೀ ಚುನಾವಣೆಯನ್ನು ಪ್ರಕಾಶ್‌ ಕಾರಟ್‌ ಸಮಗ್ರವಾಗಿ ವಿಶ್ಲೇಷಣೆ ಮಾಡಿದ್ದಾರೆ.

ನಾವು ಗ್ರಾಮೀಣ ಭಾಗವನ್ನು ನಿರ್ಲಕ್ಷ್ಯ ಮಾಡಿದೆವು. ಅಲ್ಲಿ ಆರ್‌ಎಸ್‌ಎಸ್‌ ಗಂಭೀರ ಕಾರ್ಯಾಚರಣೆ ನಡೆಸಿತು ಎಂದು ಕಾರಟ್‌ ಹೇಳಿದ್ದಾರೆ.

ಈ ಗ್ರಾಮೀಣ ಭಾಗಗಳಲ್ಲಿ ಬಿಜೆಪಿಗೆ ಭಾರಿ ಬಹುಮತ ಬಿದ್ದವು. ಇಡೀ ರಾಜ್ಯದಲ್ಲಿ ಕಮಲ ಅರಳಿತು. ನಾವು ಚುನಾವಣೆಯನ್ನು ಗೆಲ್ಲಬೇಕಾದರೆ ಕಾರ್ಯಾಚರಣೆ ಅಥವಾ ಪ್ರಚಾರ ನಡೆಸುವುದು ಬೇಕಾಗಿಲ್ಲ. ಆರ್‌ಎಸ್‌ಎಸ್‌ ಮಾದರಿಯಲ್ಲಿ ಸಮಾಜ ಸೇವೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರಕಾಶ್ ಕಾರಟ್‌ ತಿಳಿಸಿದ್ದಾರೆ.

Comments are closed.