ರಾಷ್ಟ್ರೀಯ

ಆಧಾರ್ ಜೋಡಣೆ ಕಡ್ಡಾಯಕ್ಕೆ ಮಾ.31 ಕೊನೆಯಲ್ಲ

Pinterest LinkedIn Tumblr


ದೆಹಲಿ: ಬ್ಯಾಂಕ್ ಖಾತೆ ಮತ್ತು ಇತರ ಯೋಜನೆಗಳಿಗೆ ಆಧಾರ್ ಸಂಖ್ಯೆ ಜೋಡ ಣೆಯ ಅಂತಿಮ ದಿನಾಂಕವನ್ನು ಮತ್ತೆ ಮತ್ತೆ ಮುಂದೂಡುವ ಸಾಧ್ಯತೆ ಇದೆ. ಈ ಮೊದಲು ಜೋಡಣೆಗೆ ಮಾ.31 ಕೊನೆಯ ದಿನಾಂಕವಾಗಿತ್ತು. ಆದರೆ ಸರಕಾರ ಬಯಸಿದರೆ ದಿನಾಂಕ ಮತ್ತೆ ಮುಂದೂಡಬಹುದು ಎಂದು ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ.

ಆಧಾರ್ ಅನ್ನು ಬೇರೆ ಬೇರೆ ಯೋಜನೆಗಳಿಗೆ ಜೋಡಿಸುವುದರಿಂದ ಖಾಸಗಿ ತನಕ್ಕೆ ಧಕ್ಕೆಯಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಈ ಪ್ರಕರಣ ಕೋರ್ಟ್ ನಲ್ಲಿ ಇನ್ನೂ ವಿಚಾರಣೆ ಹಂತದಲ್ಲಿದೆ. ವಿಚಾರಣೆ ಮುಗಿಯುವವರೆಗೂ ಆಧಾರ್ ಜೋಡಣೆ ದಿನಾಂಕವನ್ನು ವಿಸ್ತರಿಸಬೇಕಾಗುವುದೆಂದು ಸುಪ್ರೀಂ ಹೇಳಿದೆ.

ಆದರೆ, ಆಧಾರ್ ಜೋಡಣೆಗೆ ಕೊನೆಯ ದಿನಾಂಕವನ್ನು ಎಲ್ಲಿಯವರೆಗೆ ವಿಸ್ತರಿಸಲಾಗುವುದು ಎಂಬ ಕುರಿತು ಖಚಿತವಾಗಿಲ್ಲ. ಅವ್ಯವಹಾರ ತಡೆಗಾಗಿ ಕೇಂದ್ರ ಸರಕಾರ ತನ್ನ ಎಲ್ಲಾ ಯೋಜನೆ ಮತ್ತು ಬ್ಯಾಂಕ್ ಇತ್ಯಾದಿ ಸೇವಾ ಕ್ಷೇತ್ರಗಳೊಂದಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿತ್ತು.

Comments are closed.