ರಾಷ್ಟ್ರೀಯ

ಪ್ರಸಿದ್ಧ ವಜ್ರ ವ್ಯಾಪಾರಿಯ ಪುತ್ರಿ ಜೊತೆ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಆಕಾಶ್ ವಿವಾಹ !

Pinterest LinkedIn Tumblr

ಮುಂಬಯಿ: ದೇಶದ ಅಗರ್ಭ ಶ್ರೀಮಂತರಾದ ಉದ್ಯಮಿ ಮುಖೇಶ್ ಅಂಬಾನಿಯವರ ಮಗ ಆಕಾಶ್ ಅಂಬಾನಿ ಶೀಘ್ರವೇ ಸಪ್ತಪದಿ ತುಳಿಯಲಿದ್ದಾರೆ.

ಮೂಲಗಳ ಪ್ರಕಾರ ಮುಖೇಶ್ ಅಂಬಾನಿ ಪುತ್ರ ಆಕಾಷ್ ರೋಸಿ ಬ್ಲೂ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಸೆಲ್ ಮೆಹ್ತಾ ಪುತ್ರಿ ಶ್ಲೋಕ ಅವರನ್ನು ವರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರೋಸಿ ಬ್ಲೂ ಇಂಡಿಯಾ ದೇಶದ ಪ್ರಸಿದ್ಧ ವಜ್ರದ ಕಂಪನಿಗಳಲ್ಲೊಂದಾಗಿದೆ. ಆದರೆ ಈ ವಿಷಯದ ಬಗ್ಗೆ ಎರಡು ಕುಟುಂಬಗಳು ಎಲ್ಲಿಯೂ ಯಾವುದೇ ಮಾಹಿತಿಯನ್ನು ನೀಡಿಲ್ಲ, ಶೀಘ್ರವೇ ನಿಶ್ಚಿತಾರ್ಥ ನಡೆಯಲಿದ್ದು, ಡಿಸೆಂಬರ್ ನಲ್ಲಿ ಮದುವೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಮುಖೇಶ್ ಅಂಬಾನಿಗೆ ಮೂವರು ಮಕ್ಕಳಿದ್ದು, ಆಕಾಶ್, ಇಶಾ, ಮತ್ತು ಅನಂತ್, ಆಕಾಶ್ ಮತ್ತು ಇಶಾ ಅವಳಿ ಮಕ್ಕಳಾಗಿದ್ದಾರೆ.

ಆಕಾಶ್ ರಿಲಾಯನ್ಸ್ ಜಿಯೋ ಮುಖ್ಯಸ್ಥನಾಗಿದ್ದು, ಶ್ಲೋಕ ರೋಸಿ ಬ್ಲೂ ಫೌಂಡೇಶನ್ ನ ನಿರ್ದೇಶಕಿಯಾಗಿದ್ದಾರೆ. ಶ್ಲೋಕ ರಸೆಲ್ ಮೆಹ್ತಾ ಮತ್ತು ಮೋನಾ ಅವರ ಕಿರಿಯ ಮಗಳಾಗಿದ್ದಾಳೆ,

Comments are closed.