ರಾಷ್ಟ್ರೀಯ

ಸಂಜೆ ಮದುವೆಯಾಗಲಿದ್ದ, ಮೊಬೈಲ್‌ ಗುಂಗಿನಲ್ಲೇ ರೈಲಿಗೆ ಬಲಿಯಾದ

Pinterest LinkedIn Tumblr


ಬರೇಲಿ: ಸಂಜೆ ಮದುವೆಯಾಗಲಿದ್ದ ಯುವ ಎಂಜಿನಿಯರ್‌ವೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತ ಮತ್ತೊಂದು ಮೊಬೈಲ್‌ನಲ್ಲಿ ಮೆಸೇಜ್‌ ಓದುತ್ತಿದ್ದಾಗ ರಾಜ್ಯ ರಾಣಿ ಎಕ್ಸ್‌ಪ್ರೆಸ್‌ ರೈಲಿಗೆ ಬಲಿಯಾಗಿದ್ದಾರೆ.

ನಂದೋಸಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ನರೇಶ್‌ ಪಾಲ್‌ ಗಂಗ್ವಾರ್‌ ಮೃತಪಟ್ಟವರು. ನರೇಶ್‌ ಪಾಲ್‌ ಗಂಗ್ವಾರ್‌ ಅವರು ನೋಯ್ಡಾದಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಭಾನುವಾರ ಸಂಜೆ ಉಮಾ ಗಂಗ್ವಾರ್‌ ಜತೆ ಶಹಜಾನ್‌ಪುರದಲ್ಲಿ ಮದುವೆ ನಿಗದಿಯಾಗಿತ್ತು. ಮನೆಯವರೆಲ್ಲ ಮದುವೆಗೆ ಕೊನೆಯ ಕ್ಷಣದ ತಯಾರಿಯಲ್ಲಿದ್ದರು.

ರೈಲ್ವೆ ಹಳಿ ಮನೆಗಿಂತ 50 ಮೀಟರ್‌ ದೂರವಿದೆ. ಸಹೋದ್ಯೋಗಿಯೊಬ್ಬರ ಕರೆ ಬಂದಾಗ ನರೇಶ್‌ ಪಾಲ್‌ ಮನೆಯಿಂದ ಹೊರ ಹೋಗಿದ್ದರು. ಒಂದು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಅವರು ಮತ್ತೊಂದು ಮೊಬೈಲ್‌ನಲ್ಲಿ ಮೆಸೇಜ್‌ ಓದುತ್ತಿದ್ದರು. ಗಮನವೆಲ್ಲ ಮೊಬೈಲ್‌ನಲ್ಲೇ ಇದ್ದ ಕಾರಣ ರೈಲು ಬರುತ್ತಿರುವ ಶಬ್ದ ಅವರಿಗೆ ಕೇಳಿಸಲೇ ಇಲ್ಲ, ರೈಲು ಡಿಕ್ಕಿ ಹೊಡೆಯಿತು ಎಂದು ಅವರ ಆಪ್ತ ಸಂಬಂಧಿ ವೀರೇಶ್‌ ಹೇಳಿದ್ದಾರೆ.

ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿದ್ದು ನಮಗೆಲ್ಲ ಆಘಾತವುಂಟು ಮಾಡಿದೆ. ಅವರ ವಧುವಿನ ಗೋಳು ನೋಡಲಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ನರೇಶ್‌ ಪಾಲ್‌ ಗಂಗ್ವಾರ್‌ ತನ್ನ ಅವಿವೇಕತನದಿಂದಮೃತಪಟ್ಟಿದ್ದು, ಅವರ ಸಾವಿಗೆ ವಧುವಿನ ದುರಾದೃಷ್ಟ ಕಾರಣ ಎಂದು ಹಳಿಯಲಾಗುತ್ತಿದೆ. ಸೆಲ್ಫಿ ಸೇರಿದಂತೆ ಮೊಬೈಲ್‌ ಗೀಳಾಗಿ ಪರಿಣಮಿಸಿರುವುದರಿಂದ 2014ರಿಂದ 2016ರ ಜನವರಿವರೆಗೆ 16 ಮಂದಿ ರೈಲು ಹಳಿಯಲ್ಲಿ ಸಾವು ಕಂಡಿದ್ದಾರೆ.

Comments are closed.