ಮನೋರಂಜನೆ

ಕಮಲ ಹಾಸನ್​ ನೂತನ ಪಕ್ಷ ಮಕ್ಕಳ್​ ನೀತಿ ಮಯಂ

Pinterest LinkedIn Tumblr


ಮಧುರೈ: ಮಕ್ಕಳ್​ ನೀತಿ ಮಯಂ ಪಕ್ಷದ ಮೂಲಕ ತಮಿಳಿನ ಮತ್ತೊಬ್ಬ ಖ್ಯಾತ ನಟ ಕಮಲ ಹಾಸನ್​ ಅಧಿಕೃತವಾಗಿ ಬುಧವಾರ ರಾಜಕೀಯ ಪ್ರವೇಶಿಸಿದರು.

ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಉಪಸ್ಥಿತಿಯಲ್ಲಿ ಪಕ್ಷದ ಹೆಸರು ಪ್ರಕಟಿಸಿ ಮಾತನಾಡಿದ ಕಮಲ್, ಇದು ಜನರ ಪಕ್ಷ. ನಾನು ನಾಯಕನಲ್ಲ. ಪಕ್ಷದ ಹೆಸರು ಮಕ್ಕಳ್​ ನೀತಿ ಮಯಮ್. ಇದು ಒಂದು ದಿವಸದ ವಿಷಯವಲ್ಲ. ದೀರ್ಘ ಕಾಲದ ಗುರಿ ಎಂದು ಹೇಳಿದರು. ಪಕ್ಷದ ಹೆಸರು ಹೇಳಿದ ತಕ್ಷಣವೇ ಅಭಿಮಾನಿಗಳಿಂದ ಹರ್ಷೋದ್ಗಾರ ಹಾಗೂ ಜಯಕಾರ ಮೊಳಗಿತು.

ಇದಕ್ಕೂ ಮೊದಲು ಬೆಳಗ್ಗೆ ರಾಮೇಶ್ವರಂನಲ್ಲಿರುವ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಮನೆಗೆ ಕಮಲ್ ಭೇಟಿ ನೀಡಿದ್ದರು. ತವರು ಪಟ್ಟಣ ಪರಮಕ್ಕುಡಿಯಲ್ಲಿ ಅಭಿಮಾನಿಗಳಿಗೆ ಕಾರಿನಲ್ಲೇ ಕುಳಿತು ಮಾತನಾಡಿ ಮತ್ತೆ ಬರುತ್ತೇನೆ ಎಂದು ತೆರಳಿದ್ದರು.

ಬಹುದಿನಗಳಿಂದ ರಾಜಕೀಯ ಪ್ರವೇಶದ ಒಲವು ತೋರುತ್ತಿದ್ದ ಕಮಲ ಹಾಸನ್​ ತಮ್ಮ ಪಕ್ಷದ ಹೆಸರನ್ನು ಘೋಷಿಸುವ ಮೂಲಕ ತಮ್ಮ ಜೀವನದ ಹೊಸ ಬದುಕನ್ನು ಆರಂಭಿಸಿದ್ದಾರೆ. 2017ರ ಸೆಪ್ಟೆಂಬರ್​ನಲ್ಲಿ ರಾಜಕೀಯಕ್ಕೆ ಬರುವುದನ್ನು ಖಚಿತ ಪಡಿಸಿದ್ದ ಕಮಲ ಹಾಸನ್​​ ಇನ್ನು ಮುಂದೆ ರಾಜಕಾರಣದಲ್ಲಿ ಸಕ್ರಿಯರಾಗಿರಲಿದ್ದಾರೆ.

4ನೇ ವರ್ಷಕ್ಕೆ ಬಾಲನಟನಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಕಮಲ ಹಾಸನ್​ ತಮ್ಮ ವೃತ್ತಿ ಜೀವನದಲ್ಲಿ ನಟ, ನಿರ್ದೇಶಕ, ಹಿನ್ನೆಲೆ ಗಾಯಕ, ಸಾಹಿತ್ಯ ರಚನೆಕಾರ, ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Comments are closed.