ರಾಷ್ಟ್ರೀಯ

ಜುಲೈ 1ರಿಂದ ಮೊಬೈಲ್ ಸಂಖ್ಯೆಗಳು 10ರ ಬದಲು 13 ಡಿಜಿಟ್ಸ್‌‌!

Pinterest LinkedIn Tumblr


ದೆಹಲಿ: ಮೊಬೈಲ್ ಸಂಖ್ಯೆಗಳ 10 ಅಂಕಿಗಳನ್ನು 13ಕ್ಕೆ ಏರಿಸಲು ಭಾರತೀಯ ದೂರವಾಣಿ ಇಲಾಖೆ ನಿರ್ಧರಿದ್ದು, ಈಗಿರುವ 10 ಡಿಜಿಟ್ ಬದಲಾಗಿ ಜುಲೈ 1ರಿಂದ 13 ಡಿಜಿಟ್ ನಂಬರ್ ಚಲಾವಣೆಗೆ ಬರಲಿದೆ.
ನೆಟ್‌ವರ್ಕ್ ಕಂಪನಿಗಳಿಗೆ ಮೊಬೈಲ್ ಸಂಖ್ಯೆಗೆ ಹೆಚ್ಚುವರಿಯಾಗಿ ಮೂರು ಅಂಕಿಗಳನ್ನು ಸೇರಿಸಲು ಸೂಚಿಸಲಾಗಿದೆ. ಬಿಎಸ್‌ಎನ್ಎಲ್ ಸಹ 2018ರ ಡಿಸೆಂಬರೊಳಗೆ 13 ಸಂಖ್ಯೆಗಳನ್ನು ಗ್ರಾಹಕರಿಗೆ ನೀಡಲಿದೆ. ಅಕ್ಟೋಬರ್ 1ರಿಂದ ಡಿಸೆಂಬರ್ 31ರೊಳಗೆ ಈ ಬದಲಾವಣೆ ಪ್ರಕ್ರಿಯೆ ನಡೆಯಲಿದೆಯಂತೆ. ಮೊಬೈಲ್ ಸಂಖ್ಯೆಗಳ ಬದಲಾವಣೆ ಬಗ್ಗೆ ದೂರವಾಣಿ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿಲ್ಲ. ಇನ್ನು ಬೃಹತ್ ನೆಟ್‌ವರ್ಕ್ ಜಾಲ ಹೊಂದಿರುವ ವೊಡಾಫೋನ್, ಜಿಯೋ, ಐಡಿಯಾ ಆದೇಶದ ಬಗ್ಗೆ ಇನ್ನೂ ಮಾಹಿತಿ ಇಲ್ಲವೆಂದು ತಿಳಿಸಿವೆ.

Comments are closed.