ಹೈದರಾಬಾದ್: ಅಂತಾರಾಷ್ಟ್ರೀಯ ಟಿ-20 ಪಂದ್ಯ ಆರಂಭವಾಗಿ ಇಂದಿಗೆ 13 ವರ್ಷ ಕಳೆದಿವೆ. ಟಿ-20 ಚರಿತ್ರಯೆ ಮೊದಲ ಪಂದ್ಯ ನಡೆದಿದ್ದು ಹಾಗೂ ಕೊನೆಯ ಪಂದ್ಯದಲ್ಲಿ ವಿಜೃಂಭಿಸಿದ್ದು ಆಸೀಸ್ ಮತ್ತು ಕೀವಿಸ್ ತಂಡ.
ಫೆ.17ರಂದು ಮೊದಲ ಟಿ-20 ಪಂದ್ಯ ನ್ಯೂಜಿಲೆಂಡ್‌ನ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಆಸೀಸ್ ಮತ್ತು ಕಿವೀಸ್ ಮಧ್ಯೆ ನಡೆದಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸೀಸ್ 20 ಓವರ್‌ಗೆ ಐದು ವಿಕೆಟ್‌ಗಳ ನಷ್ಟಕ್ಕೆ 214 ರನ್‌ಗಳನ್ನು ಕಲೆ ಹಾಕಿ, ನ್ಯೂಜಿಲೆಂಡ್ ತಂಡಕ್ಕೆ 215 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಆಸೀಸ್ ಪರ ನಾಯಕ ರಿಕಿ ಪಾಂಟಿಂಗ್ ಔಟಾಗದೇ 98 ರನ್‌ಗಳನ್ನು ಗಳಿಸಿ ಮಿಂಚಿದ್ದರು.
ಇನ್ನು ಆಸೀಸ್ ನೀಡಿದ್ದ ಮೊತ್ತ ಬೆನ್ನತ್ತಿದ್ದ ಕೀವಿಸ್ ತಂಡ 20 ಓವರ್‌ಗೆ 170 ರನ್‌ಗಳನ್ನು ಗಳಿಸಿ ಆಲೌಟ್ ಆಗಿತ್ತು. ಇದರಲ್ಲಿ ಕಿವೀಸ್ ಪರ ಸ್ಕಾಟ್ ಸ್ಟೈರೀಸ್ 66 ರನ್‌ಗಳನ್ನು ಕಲೆ ಹಾಕಿದರು. ಕಿವೀಸ್ ತಂಡ 44 ರನ್‌ಗಳಿಂದ ಆಸೀಸ್ ವಿರುದ್ಧ ಪರಾ ಭವಗೊಂಡಿತ್ತು. ಅಂದಿನಿಂದ ಇಲ್ಲಿಯವರೆಗೆ ಒಟ್ಟು 649 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳು ನಡೆದಿವೆ.