ರಾಷ್ಟ್ರೀಯ

ವಿಶ್ವ ರೇಡಿಯೋ ದಿನ: ರೇಡಿಯೋದಿಂದ ಜನರು ಹತ್ತಿರಾಗುತ್ತಾರೆ ಅಂದ್ರು ಪ್ರಧಾನಿ

Pinterest LinkedIn Tumblr


ನವದೆಹಲಿ: ವಿಶ್ವ ರೇಡಿಯೋ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂದೇಶ ಕಳಿಸಿದ್ದು, ರೇಡಿಯೋ ಜನರನ್ನು ಹತ್ತಿರಕ್ಕೆ ಸೇರಿಸುತ್ತದೆ ಎಂದು ಹೇಳಿದ್ದಾರೆ.

ಪ್ರತಿ ತಿಂಗಳು ದೇಶದ ಜನತೆಯನ್ನು ಉದ್ದೇಶಿಸಿ ಮನ್‌ ಕಿ ಬಾತ್‌ನಲ್ಲಿ ಮಾತನಾಡುವ ಅವರು, ವಿಶ್ವದ ಎಲ್ಲ ರೇಡಿಯೋ ಮತ್ತು ರೇಡಿಯೋ ಕೇಳುಗರಿಗೆ ಶುಭಾಶಯ ಕೋರಿದ್ದಾರೆ.

ಸಂವಹನ ಮಾಧ್ಯಮವು ಯಾವಾಗಲೂ ಕಲಿಕೆಯ, ಹೊಸ ಅನ್ವೇಷಣೆಯ, ಮನರಂಜನೆ ಮತ್ತು ಜತೆಯಾಗಿ ಎಲ್ಲರನ್ನು ಬೆಳೆಸುವಂತಹ ಕೇಂದ್ರ ಬಿಂದುವಾಗಿದೆ. ಇದನ್ನು ಮನ್‌ ಕಿ ಬಾತ್‌ ಮೂಲಕ ತಾನು ಕಂಡುಕೊಂಡಿದ್ದೇನೆ ಎಂದು ತಿಳಿಸಿರುವ ಅವರು, ಮನ್‌ ಕಿ ಬಾತ್‌ನ ಎಲ್ಲ ಸಂಚಿಕೆಗಳ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಕೂಡ ವಿಶ್ವ ರೇಡಿಯೋ ಅಂಗವಾಗಿ ಶುಭಾಶಯ ಕೋರಿದ್ದು, ಸಂವಹನಕ್ಕೆ ರೇಡಿಯೋ ಒಂದು ಶಕ್ತಿಶಾಲಿ ಮಾಧ್ಯಮ. ಇದು ನಮ್ಮ ಜೀವನವನ್ನು ಹಲವು ವಿಧಾನಗಳಲ್ಲಿ ತಲುಪುತ್ತದೆ. ರೇಡಿಯೋ ಮೂಲಕ ಕೇಳುವ ಧ್ವನಿಗೆ ವಿಶೇಷ ಶಕ್ತಿಯಿದೆ ಎಂದು ತಿಳಿಸಿದ್ದಾರೆ.

Comments are closed.