ಮುಂಬೈ

ಮಹಾರಾಷ್ಟ್ರದ ತೃತೀಯ ಲಿಂಗಿಗಳಿಗೆ ಅಂತೂ ಪ್ರತ್ಯೇಕ ಶೌಚಗೃಹ!

Pinterest LinkedIn Tumblr


ಮುಂಬಯಿ: ತೃತೀಯ ಲಿಂಗಿಗಳಿಗೆಂದೇ ಪ್ರತ್ಯೇಕ ಶೌಚಗೃಹಗಳನ್ನು ನಿರ್ಮಿಸುವ ಮಹತ್ವದ ನಿರ್ಣಯವನ್ನು ನಾಗ್ಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಚಿಕಿತ್ಸಾ ಕೊಠಡಿ ಮತ್ತು ಶೌಚಗೃಹಗಳನ್ನು ಒದಗಿಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ.

2014ರಲ್ಲಿ ಸುಪ್ರೀಂ ಕೋರ್ಟ್‌ ತೃತೀಯ ಲಿಂಗಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸರಕಾರಕ್ಕೆ ಆದೇಶಿಸಿತ್ತು. ಮಹಾರಾಷ್ಟ್ರ ಹೊರತು ಪಡಿಸಿ ಇತರ ರಾಜ್ಯಗಳಲ್ಲಿ ತೃತೀಯ ಲಿಂಗಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಕೈಗೊಂಡಿದ್ದವು.

ವರ್ಷದ ಹಿಂದೆ ಪ್ರತ್ಯೇಕ ಶೌಚಗೃಹ ಬೇಕು ಎಂದು ತೃತೀಯ ಲಿಂಗಿಗಳನ್ನು ಪ್ರಮುಖ ಬೇಡಿಕೆ ಇಟ್ಟಿದ್ದರು. ಸಾರ್ವಜನಿಕ ಶೌಚಗೃಹಗಳಲ್ಲಿ ಪುರುಷರ ಕೊಠಡಿಗೆ ಹೋಗಲು ಸಾಧ್ಯವಿಲ್ಲ. ಇನ್ನು ಮಹಿಳೆಯರ ಶೌಚಗೃಹಕ್ಕೆ ತೆರಳಿದರೆ ಶಂಕೆಯಿಂದ ನೋಡುವ ಪರಿಸ್ಥಿತಿ ಇದೆ. ಹಾಗಾಗಿ ಪ್ರತ್ಯೇಕ ಶೌಚಗೃಹದ ಬೇಡಿಕೆ ಇಟ್ಟಿದ್ದರು. ಪ್ರಮುಖವಾಗಿ ತೃತೀಯ ಲಿಂಗಿಗಳ ಪರ ಸಾರಥಿ ಟ್ರಸ್ಟ್‌ ಒತ್ತಾಯಿಸಿತ್ತು.

ಸರಕಾರಿ ಅಸ್ಪತ್ರೆಗಳಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ 8-10 ಕೊಠಡಿ ಮತ್ತು ಶೌಚಗೃಹಗಳನ್ನು ಒದಗಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಶೈಕ್ಷಣಿಕ ಅರ್ಹತೆಗೆ ತಕ್ಕ ಉದ್ಯೋಗಗಳನ್ನು ಒದಗಿಸುವ ಬಗ್ಗೆಯೂ ಒಪ್ಪಿಗೆ ನೀಡಲಾಗಿದೆ ಎಂದು ಸಾರಾಥಿ ಟ್ರಸ್ಟ್‌ನ ಸಿಇಒ ನಿಕುಂಜ್‌ ಜೋಶಿ ಅವರು ಮಹಾರಾಷ್ಟ್ರ ಟೈಮ್ಸ್‌‌ಗೆ ತಿಳಿಸಿದರು.

Comments are closed.