ರಾಷ್ಟ್ರೀಯ

ಅತ್ಯಾಚಾರಕ್ಕೆ ಅಡ್ಡಿ: ಬಾಲಕಿಯನ್ನು ಜೀವಂತ ಸುಡಲು ಯತ್ನಿಸಿದ ಆರೋಪಿ ಬಾಲಕ

Pinterest LinkedIn Tumblr


ಭೋಪಾಲ್: 13 ವರ್ಷದ ಬಾಲಕಿಯೊಬ್ಬಳ ಮೇಲೆ ನಡೆಸಿದ ಅತ್ಯಾಚಾರ ಯತ್ನ ವಿಫಲವಾದ ಬಳಿಕ ಆಕೆಯನ್ನು ಜೀವಂತವಾಗಿ ಸುಡಲೆತ್ನಿಸಿದ ದಾರುಣ ಘಟನೆ ರಾಜಗಢ ಜಿಲ್ಲೆಯಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಮತ್ತೊಂದು ಆಘಾತಕಾರಿ ಸಂಗತಿ ಏನೆಂದರೆ ಅತ್ಯಾಚಾರ ಮತ್ತು ಕೊಲೆಗೆತ್ನಿಸಿದ ಆರೋಪಿ ಕೂಡ ಅಪ್ರಾಪ್ತ ವಯಸ್ಕನಾಗಿದ್ದಾನೆ.

ಘಟನೆಯಲ್ಲಿ ಸಂಪೂರ್ಣ ಬೆಂದು ಹೋಗಿರುವ ಬಾಲಕಿ ಭೋಪಾಲ್‌ನ ಸರಕಾರಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ. ‘ನಾನು ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಂದರ್ಭದಲ್ಲಿ ನೆರೆಮನೆಯ ಬಾಲಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ನಾನು ಪ್ರತಿಭಟಿಸಿದ ಕಾರಣ ಆತ ಕೋಪಕೊಂಡು ಬೆಂಕಿ ಹಚ್ಚಿದ್ದಾನೆ’ ಎಂದು ಸಂತ್ರಸ್ತ ಬಾಲಕಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಬಾಲಕಿಯ ಹೇಳಿಕೆ ಆಧರಿಸಿ ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ. ಆದರೆ, ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬಾಲಕ ಹಾಗೂ ಬಾಲಕಿಯ ನಡುವೆ ಪರಸ್ಪರ ಪರಿಚಯವಿತ್ತು. ಬಾಲಕಿ 6ನೇ ತರಗತಿಗೆ ಓದು ನಿಲ್ಲಿಸಿದ್ದರೆ, ಬಾಲಕ 8ನೇ ತರಗತಿಯವರೆಗೂ ವ್ಯಾಸಂಗ ಮಾಡಿದ್ದ.

Comments are closed.