ಅಂತರಾಷ್ಟ್ರೀಯ

ಓಮಾನ್​ ಸುಲ್ತಾನ್​ ಖಾಬೂಸ್​ರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ: 8 ಒಪ್ಪಂದಗಳಿಗೆ ಸಹಿ

Pinterest LinkedIn Tumblr


ಮಸ್ಕತ್​: ಮಧ್ಯಪ್ರಾಚ್ಯ ದೇಶಗಳ ಪ್ರವಾಸದ ಕೊನೆಯ ಹಂತದಲ್ಲಿ ಓಮಾನ್​ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದು, ಸುಲ್ತಾನ್​ ಖಾಬೂಸ್​ ಬಿನ್​ ಸೈದ್​ ಅಲ್​ ಸೈದ್​ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಯುಎಇ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಅವರು ಭಾನುವಾರ ಓಮಾನ್​ಗೆ ತಲುಪಿದರು. ಅಲ್ಲಿ ಅವರು ಬಂಡವಾಳ ಹೂಡಿಕೆ, ಇಂಧನ, ರಕ್ಷಣೆ ಮತ್ತು ಸುರಕ್ಷಣೆ, ಆಹಾರ ಭದ್ರತೆ ಸೇರಿದಂತೆ ಹಲವು ವಿಷಯಗಳ ಕುರಿತು ಸುಲ್ತಾನ್​ ಖಾಬೂಸ್​ ಸೇರಿದಂತೆ ಹಲವರೊಂದಿಗೆ ಚರ್ಚೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್​ ಕುಮಾರ್​ ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು 8 ಒಪ್ಪಂಗಳಿಗೆ ಸಹಿ ಹಾಕಿವೆ. ಇವುಗಳಲ್ಲಿ ನಾಗರಿಕ ಮತ್ತು ವಾಣಿಜ್ಯ ವಿಷಯಗಳಲ್ಲಿ ಕಾನೂನಾತ್ಮಕ ಸಹಕಾರ ನೀಡುವುದು, ಆರೋಗ್ಯ, ಪ್ರವಾಸೋದ್ಯಮ, ರಾಜತಾಂತ್ರಿಕ ಮತ್ತು ವಿಶೇಷ ಪಾಸ್​ಪೋರ್ಟ್​ ಹೊಂದಿರುವವರಿಗೆ ವೀಸಾ ನಿಯಮಾವಳಿಗಳನ್ನು ಸಡಿಲಿಸುವ ವಿಷಯ ಸೇರಿದಂತೆ ಒಟ್ಟು 8 ಒಪ್ಪಂದಗಳಿಗೆ ಸಹಿ ಮಾಡಲಾಯಿತು.

ಇದಕ್ಕೂ ಮುನ್ನ ಖಾಬೂಸ್​ ಕ್ರಿಡಾಂಗಣದಲ್ಲಿ ಓಮಾನ್​ನಲ್ಲಿ ನೆಲೆಸಿರುವ ಭಾರತೀಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಇಂದು ಭಾರತದ ಚಿತ್ರಣ ಬದಲಾಗಿದೆ. ನ್ಯೂ ಇಂಡಿಯಾ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಭಾರತೀಯ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದಾನೆ. ಸರ್ಕಾರ ಕೂಡ ಬಡವರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದೆ. ಕೇವಲ 90 ಪೈಸೆಗೆ ಜೀವವಿಮೆ ಸೇವೆಯನ್ನು ಸರ್ಕಾರ ಒದಗಿಸುತ್ತಿದೆ ಎಂದು ಮೋದಿ ತಿಳಿಸಿದರು.

Comments are closed.